ಗಗನಕ್ಕೇರಿದ ತರಕಾರಿ ಬೆಲೆ

ಬಡವ, ಮಧ್ಯಮ ವರ್ಗದವರು ಬದುಕಲು ಸಾಧ್ಯವೇ  ನಿತ್ಯ ಬಳಕೆ ಸಾಮಾನಿನ ಬೆಲೆ ದಿನಾ ಏರುತ್ತಿದೆ ದಿನಸಿ ಔಷಧಿಗಳ ಬೆಲೆ ಗಗನಕ್ಕೇರಿದೆ ಗ್ಯಾಸ್ ಬೆಲೆಯೇರಿಕೆಯಿಂದ ಜನ ತತ್ತರಿಸಿ ಹೋದರು ಈಗ ಅಗತ್ಯ ಪದಾರ್ಥವಾದ ತರಕಾರಿ ಬೆಲೆ ಗಗನಕ್ಕೇರಿದೆ ಯಾವುದೇ ತರಕಾರಿಗೆ 50 ರೂ 60 ರೂಪಾಯಿ ಕೇಜಿಗೆ ಒಮ್ಮೆ ಯಾರಿಗೂ ಬೇಡವಾದ ಟೊಮೆಟೋ ಬೆಲೆ ಕೇಜಿಗೆ 80ರಿಂದ 100 ರೂಪಾಯಿ ಇನ್ನು ಮೊಟ್ಟೆ ಮೀನು ಮಾಂಸ ಕನಸಲ್ಲಿ ತಿನ್ನಬೇಕು ಸರಕಾರ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಇದಕ್ಕಾಗಿ ಒಳ್ಳೆಯ ಉಪಾಯವೆಂದರೆ ಸರಕಾರವೇ ಕಡಿಮೆ ಬೆಲೆಯ ಅಂಗಡಿ ತೆರೆಯಲಿ

  • ಕೃಷ್ಣಾ  ಪುತ್ತೂರು