ಉತ್ತುಬಿಟ್ಟ ಗದ್ದೆಯಂತಾದ ವೀರಮಂಗಲ ಕೈಲಾಜೆ ರಸ್ತೆ

ಗ್ರಾಮೀಣ ಭಾಗದ ಜನತೆಯ ಮೂಲಭೂತ ಸೌಕರ್ಯಗಳನ್ನು ಈಡೇರಿಸಲು ಇನ್ನೂ ಸಾಧ್ಯವಾಗಿಲ್ಲ ಎಂಬುವುದು ಶಾಂತಿಗೋಡು ಗ್ರಾಮದ ವೀರಮಂಗಲ-ಕೈಲಾಜೆ ಸಂಪರ್ಕ ರಸ್ತೆಯನ್ನು ನೋಡುವಾಗ ತಿಳಿಯುತ್ತದೆ ಈ ರಸ್ತೆಯು ಉತ್ತುಬಿಟ್ಟ ಗದ್ದೆಯಂತಾಗಿದೆ. ವಾಹನ ಸಂಚಾರ ಬಿಡಿ ನಡೆದಾಡಲು ಕಷ್ಟಪಡುವಂತಹ ಸ್ಥಿತಿಯಲ್ಲಿದೆ. ಸುಮಾರು 20ಕ್ಕೂ ಹೆಚ್ಚು ಜನವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯಾರೂ ಮುಂದಾಗದಿರುವುದು ದುರದೃಷ್ಟಕರ. ಇಲ್ಲಿನ ಜನತೆಗೆ ಕೇವಲ ರಸ್ತೆಯ ಸಮಸ್ಯೆ ಮಾತ್ರವಲ್ಲ, ಮೂಲಭೂತ ಸಮಸ್ಯೆಗಳ ಸಂಪರ್ಕ ವ್ಯವಸ್ಥೆಯಲ್ಲಿಯೂ ಎಡವಿದೆ. ಒಟ್ಟಿನಲ್ಲಿ ಅವಸ್ಥೆ ಆಗರವಾದ ಈ ಗ್ರಾಮದಲ್ಲಿ ಜವಾಬ್ದಾರಿ ಜನಪ್ರತಿನಿಧಿಗಳನ್ನು ಅಣಕಿಸುವಂತಿದೆ ಈ ರಸ್ತೆ

  • ಸಂದೇಶ್ ಶೆಟ್ಟಿ  ವೀರಮಂಗಲ