ವರುಣ್ ಹಿರೋಯಿನ್ ಈಕೆ

 

ವರುಣ್ ಧಾವನ್ ಈಗ `ಅಕ್ಟೋಬರ್’ ಚಿತ್ರದಲ್ಲಿ ನಟಿಸುತ್ತಿದ್ದು ಆತನ ನಾಯಕಿಯಾಗಿ ಬಾನಿಟಾ ಸಂಧು ಎನ್ನುವ ಹಾಟ್ ಹುಡುಗಿ ನಟಿಸುತ್ತಿದ್ದಾಳೆ. ಬಾನಿಟಾ ಒಬ್ಬಳು ಮಾಡೆಲ್ ಆಗಿದ್ದು ಆಕೆ ಎನ್ನಾರೈ. ಆಕೆ ನೆಲೆಸಿರುವುದು ಲಂಡನ್ನಿನಲ್ಲಿ. ಇದೀಗ ಇನ್ನೂ 18ನೇ ವಯಸ್ಸಿನಲ್ಲಿರುವ ಬಾನಿಟಾ ತನ್ನ 11ನೇ ವರ್ಷಕ್ಕೇ ಮಾಡೆಲಿಂಗ್ ಜಗತ್ತಿಗೆ ಇಳಿದಿದ್ದಳು. ಬಾನಿಟಾ ಹಲವಾರು ಟೀವಿ ಜಾಹೀರಾತಿಗೆ ರೂಪದರ್ಶಿಯಾಗಿದ್ದಾಳೆ. ಆಕೆಯ `ಡಬಲ್ ಮಿಂಟ್’ ಜಾಹೀರಾತಂತೂ ಆಕೆಯನ್ನು ಟಾಪ್ ಮಾಡೆಲ್ ಲಿಸ್ಟಿನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ.

`ಅಕ್ಟೋಬರ್’ ಡೈರೆಕ್ಟರ್ ಸೂಜಿತ್ ಸರ್ಕಾರ್ ನಿರ್ದೇಶಿಸಿರುವ ಜಾಹೀರಾತೊಂದರಲ್ಲಿಯೂ ನಟಿಸಿರುವ ಬಾನಿಟಾ ಬಗ್ಗೆ ಇಂಪ್ರೆಸ್ ಆದ ಅವರು ತಮ್ಮ ಚಿತ್ರದಲ್ಲಿ ಆಕೆಯನ್ನೇ ಈಗ ನಾಯಕಿಯಾಗಿ ಆಯ್ಕೆಮಾಡಿಕೊಂಡಿದ್ದಾರೆ. ಹಲವಾರು ಬೆಡಗಿಯರನ್ನು ಸೂಜಿತ್ ತಮ್ಮ ಚಿತ್ರಕ್ಕಾಗಿ ಆಡಿಶನ್ ಮಾಡಿದ್ದರೂ ಕೊನೆಗೆ ಗೆದ್ದಿದ್ದು ಬಾನಿಟಾಳೇ. `ಅಕ್ಟೋಬರ್’ ಸಿನಿಮಾವೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು ಅದರ ಶೂಟಿಂಗ್ ಈಗ ಕೊನೆಯ ಹಂತದಲ್ಲಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಸಿನಿಮಾ ಎಪ್ರಿಲ್ 13ರಂದು ತೆರೆಕಾಣಲು ಶೆಡ್ಯೂಲ್ ಆಗಿದೆ.

LEAVE A REPLY