ಸೂಜಿತ್ ಚಿತ್ರದಲ್ಲಿ ವರುಣ್ ಜೊತೆ ಹೊಸ ಹುಡುಗಿ

ಸೂಜಿತ್ ಸರ್ಕಾರ್ ತಮ್ಮ ಹೊಸ ಚಿತ್ರ `ಅಕ್ಟೋಬರ್’ ಅನೌನ್ಸ್ ಮಾಡಿದ್ದು ಚಿತ್ರಕ್ಕೆ ಈಗಾಗಲೇ ವರುಣ್ ಧಾವನ್ ಆಯ್ಕೆಯಾಗಿದ್ದಾನೆ. ಈ ಚಿತ್ರಕ್ಕೆ ಸೂಜಿತ್ ಬ್ಯಾನಿಟಾ ಸಂಧು ಎನ್ನುವ ಹೊಸಹುಡುಗಿಯನ್ನು ನಾಯಕಿಯಾಗಿ ಸೆಲೆಕ್ಟ್ ಮಾಡಿದ್ದಾರೆ.

ಸೂಜಿತ್ ಈಗಾಗಲೇ ಕೆಲವಾರು ಟ್ಯಾಲೆಂಟ್ ಇರುವ ನಟನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಮಿನಿಷಾ ಲಾಂಬಾ, ಯಾಮಿ ಗೌತಮ್, ಆಯುಷ್ಮಾನ್ ಖುರಾನಾ ಇವರನ್ನೆಲ್ಲ ಸೂಜಿತ್ ಅವರೇ ಚಿತ್ರರಂಗಕ್ಕೆ ಪರಿಚಯಿಸಿದ್ದು.

ಬ್ಯಾನಿಟಾ ಸಂಧು ಯುನೈಟೆಡ್ ಕಿಂಗ್‍ಡಂನ ವೇಲ್ಸ್‍ನವಳು. ಈಗಾಗಲೇ ಆಕೆ ಕೆಲವು ಜಾಹೀರಾತುಗಳಿಗೆ ರೂಪದರ್ಶಿಯಾಗಿದ್ದಾಳೆ. ಸೂಜಿತ್ ಅವರ ಟೀವಿ ಕಮರ್ಷಿಯಲ್ಸ್‍ನಲ್ಲಿ ಬ್ಯಾನಿಟಾ ಮಾಡೆಲ್ ಆಗಿದ್ದಳು. ಈಗ ತಮ್ಮ ಚಿತ್ರಕ್ಕೆ ಹೊಸಮುಖವನ್ನು ಹುಡುಕುತ್ತಿರುವಾಗ ಬ್ಯಾನಿಟಾಳೇ ಆ ಚಿತ್ರಕ್ಕೆ ಸರಿ ಎನಿಸಿ ಆಕೆಗೆ ಅವಕಾಶ ನೀಡುತ್ತಿದ್ದಾರೆ. `ವಿಕಿ ಡೋನಾರ್’, `ಪೀಕು’ವಿನಂತಹ ಯಶಸ್ವೀ ಚಿತ್ರ ಸೂಜಿತ್ ನೀಡಿರುವುದರಿಂದ ಸಹಜವಾಗಿಯೇ ಅವರ `ಅಕ್ಟೋಬರ್’ ಸಿನಿಮಾದ ಬಗ್ಗೆಯೂ ಸಿನಿರಸಿಕರಿಗೆ ನಿರೀಕ್ಷೆ ಹೆಚ್ಚಿರುತ್ತದೆ.