ಮಂಗಳೂರು ವಾರ್ಸಿಟಿ ಪ್ರೊಫೆಸರ್ ಅಮಾನತು

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಹ್ಯೂಮನ್ ಕಾನ್‍ಸಿಕ್ಯೂಸಿನೆಸ್ ಅಂಡ್ ಯೋಗಿಕ್ ಸಾಯನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ಯಾಂ ಸುಂದರ್ ಜೆ ಅವರನ್ನು ತಕ್ಷಣದಿಂದ ಅಮಾನತು ಮಾಡಲಾಗಿದೆ. ಅವರನ್ನು ಕಾಲೇಜಿಗೆ ನೇಮಕ ಮಾಡಿದ ನಾಲ್ಕು ವರ್ಷಗಳ ಬಳಿಕ ಮಂಗಳೂರು ವಿ ವಿ ಈ ನಿರ್ಧಾರ ಕೈಗೊಂಡಿದೆ. ಇವರ ವರ್ತನೆಗಳಿಂದ ವಿ ವಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. 2 ಮತ್ತು 4ನೇ ಸೆಮೆಸ್ಟರಿನ ವಿದ್ಯಾರ್ಥಿಗಳಿಗೆ ಇವರು ಯಾವುದೇ ತರಗತಿಗಳನ್ನು ತೆಗೆದುಕೊಂಡಿಲ್ಲ ಎನ್ನುವ ಆರೋಪವಿದೆ. ದಿನ ನಿತ್ಯದ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಅಧ್ಯಕ್ಷರೊಂದಿಗೆ ಸಹಕಾರ ನೀಡುತ್ತಿಲ್ಲ, ವಿಭಾಗದ ಮೀಟಿಂಗ್ ತಪ್ಪಿಸುವುದು, ಮೊದಲ ಮತ್ತು ಮೂರನೇ ಸೆಮೆಸ್ಟರ್ ವಿದ್ಯಾರ್ಥಿಗಳಿಗೆ ಯಾವುದೇ ಪಾಠ ಪ್ರವಚನಗಳನ್ನು ಮಾಡದೇ ತರಗತಿಗೆ ಹಾಜರಾಗದೇ ಕೇವಲ ಹಾಜರಿ ಪುಸ್ತಕದಲ್ಲಿ ಸಹಿಹಾಕಿ ವಿಭಾಗದಿಂದ ಹೊರಹೋಗುವ ಆರೋಪಗಳು ಇವರ ಮೇಲಿದೆ.