ಚಂಡಮಾರುತ ಎಫೆಕ್ಟ್ : ಕರಾವಳಿಯಲ್ಲಿ ಮಳೆ

ಮ್ಮ ಪ್ರತಿನಿಧಿ ವರದಿ

ಮಂಗಳೂರು : ತಮಿಳುನಾಡಿನಾದ್ಯಂತ ವಾರ್ಧಾ ಚಂಡಮಾರುತ ಅಪ್ಪಳಿಸಿ ಜನಜೀವನ ಅಕ್ಷರಶಃ ನಲುಗಿ ಹೋಗಿದ್ದರೆ, ರಾಜ್ಯದ ಕರಾವಳಿ ಭಾಗದಲ್ಲೂ ಪ್ರತೀಕೂಲ ಹವಾಮಾನ ಕಾಣಿಸಿಕೊಂಡಿದೆ.

ಚಂಡಮಾರುತದ ಪರಿಣಾಮದಿಂದಾಗಿ ಬಂದರು ನಗರಿಯಲ್ಲಿ ಮಂಗಳವಾರ ಮುಂಜಾನೆಯಿಂದ ತುಂತುರು ಮಳೆ ಬಿದ್ದಿದೆ. ಮಧ್ಯಾಹ್ನ ಕೂಡಾ ಮಳೆ ಹನಿ ಬೀಳುತ್ತಿದ್ದು, ಸಂಜೆ ವೇಳೆಗೆ ಮಳೆ ವಿಪರೀತವಾಗಿತ್ತು. ಏಕಾಏಕಿ ಹನಿ ಮಳೆ ಸುರಿಯತೊಡಗಿದ್ದರಿಂದ ನಗರದ ಜನ ಕೊಂಚ ಉಲ್ಲಸಿತರಾದರು. ಕೆಲವು ಯುವತಿಯರು ಅಲ್ಲಲ್ಲಿ ಕೊಡೆ ಬಿಡಿಸಿಕೊಂಡು ಓಡಾಡುತ್ತಿರುವುದೂ ಕಂಡು ಬಂತು.