ಚಂಡಮಾರುತದ ಎಫೆಕ್ಟ್ : ಕೈಕೊಟ್ಟ ಏರ್ ಟೆಲ್ ನೆಟ್ವರ್ಕ್

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಏರ್ ಟೆಲ್ ನೆಟ್‍ವರ್ಕ್ ಮಂಗಳವಾರ ಬಹುತೇಕ ರಾಜ್ಯಾದ್ಯಂತ ದಿಢೀರ್ ಕೈಕೊಟ್ಟ ಪರಿಣಾಮ ಲಕ್ಷಾಂತರ ಗ್ರಾಹಕರು ಇಂಟರನೆಟ್ ಇಲ್ಲದೇ ಪರದಾಡಬೇಕಾಯಿತು.

ಇದಕ್ಕೆಲ್ಲಾ ಕಾರಣವಾಗಿರುವುದು ಮಾತ್ರ ವಾರ್ದಾ ಚಂಡಮಾರುತ. ತಮಿಳುನಾಡಿನಲ್ಲಿ ಬೀಸಿದ ಭಾರೀ ಚಂಡಮಾರುತದ ಪರಿಣಾಮ ಬೆಂಗಳೂರಿನ ಏರ್ ಟೆಲ್ ಸರ್ವರಿನಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡಿದೆ ಎಂದು ಗ್ರಾಹಕ ಸೇವಾ ಸಿಬ್ಬಂದಿ ಹೇಳಿದ್ದಾರೆ. ಮಂಗಳವಾರ ಬೆಳಗ್ಗಿನಿಂದಲೇ ಏರ್‍ಟೆಲ್ ಬಳಕೆದಾರರ ಮೊಬೈಲುಗಳಲ್ಲಿ ಇಂಟರನೆಟ್ ಸಂಪರ್ಕ ಸಾಧ್ಯವಾಗದ ಹಿನ್ನಲೆಯಲ್ಲಿ ಚಂದಾದಾರರು ಕಂಗೆಟ್ಟರು.