ಗೋವಾ ಮೂಲಕ ರಾಜ್ಯಕ್ಕೆ ಚಂಡಮಾರುತ ಎಂಟ್ರಿ ಸಾಧ್ಯತೆ

ಬೆಂಗಳೂರು : ಚೆನ್ನೈ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ ಪ್ರಬಲ `ವಾರ್ಧಾ’ ಚಂಡಮಾರುತ ನಾಳೆ ದಕ್ಷಿಣ ಗೋವಾದ ಮೂಲಕ ರಾಜ್ಯ ಪ್ರವೇಶಿಸಲಿದ್ದು, ಇಂದಿನಿಂದಲೇ ಆಯಕಟ್ಟಿನ ಪ್ರದೇಶಗಳಲ್ಲಿ ಎಚ್ಚರಿಕಾ ಕ್ರಮ ವಹಿಸಲಾಗಿದೆ.

ಚಂಡಮಾರುತದಿಂದ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ನಷ್ಟ ಉಂಟಾಗಿದೆ. ರಾಜ್ಯ ಪ್ರವೇಶಿಸಲಿರುವ ಈ ಮಾರುತದಿಂದ ದಕ್ಷಿಣ ಒಳನಾಡು ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರತಿಕೂಲ ಪ್ರಭಾವ ಬೀರುವ ಸಾಧ್ಯತೆ ಇದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಇತರ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸುವ ಹಾಗೂ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ. ಚೆನ್ನೈಯಂತೆ ಇಲ್ಲೂ ಗಾಳಿ ಮಳೆಗೆ ಮರಗಳು ಉರುಳಿ ಬೀಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

“ದಕ್ಷಿಣ ಒಳನಾಡು ಕರ್ನಾಟಕದದಲ್ಲಿ ಸೋಮವಾರದಿಂದ ಬುಧವಾರ ರಾತ್ರಿವರೆಗೆ ಸಾಧಾರಣ ಮಳೆಯಾಗಲಿದೆ. ಆದಾಗ್ಯೂ, ಸದ್ಯ ಈ ಚಂಡಮಾರುತ ಕ್ಷೀಣಿಸುತ್ತಿದೆ” ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿಗಾ ಘಟಕಸ ವಿಜ್ಞಾನಿ ಎಸ್ಸೆಎಂ ಗಾವಸ್ಕರ್ ತಿಳಿಸಿದರು.