ಹೃತಿಕ್ ಜೊತೆ ವಾಣಿ ಕಪೂರ್ ರೊಮ್ಯಾನ್ಸ್

ಯಶ್ ರಾಜ್ ಫಿಲ್ಮ್ಸ್ ಕಳೆದ ವಾರವಷ್ಟೇ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಜೋಡಿಯ ಚಿತ್ರವನ್ನು ಅನೌನ್ಸ್ ಮಾಡಿತ್ತು. ಈ ಚಿತ್ರದಲ್ಲಿ ಯಾರಿಗೆ ಹೀರೋಯಿನ್ ಆಗುವ ಅದೃಷ್ಟವಿದೆಯೋ ಎನ್ನುವ ಕುತೂಹಲ ಇರುವಾಗಲೇ ಈಗ ಗೊತ್ತಾಗಿರುವ ವಿಷಯ ಅಂದರೆ ಚಿತ್ರದಲ್ಲಿ ಒಬ್ಬಳೇ ನಾಯಕಿ ಇರಲಿದ್ದಾಳೆ. ಮೂಲಗಳ ಪ್ರಕಾರ ವಾಣಿ ಕಪೂರ್ ಈ ಸಿನಿಮಾದ ಲೀಡ್ ಲೇಡಿಯಾಗಿ ಸೆಲೆಕ್ಟ್ ಆಗಿದ್ದಾಳೆ.

ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಬಗ್ಗೆ ಮಾತಾಡುತ್ತಾ “ಚಿತ್ರದಲ್ಲಿ ಹೃತಿಕ್‍ಗೆ ಮಾತ್ರ ಹೀರೋಯಿನ್ ಇರಲಿದ್ದು ಅದಕ್ಕಾಗಿ ಯಂಗ್ & ಎನೆರ್ಜೆಟಿಕ್ ಹುಡುಗಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ವಾಣಿ ಕಪೂರ್ ನಟಿಸಿರುವ `ಶುದ್ಧ ದೇಸಿ ರೋಮ್ಯಾನ್ಸ್’ ಹಾಗೂ `ಬೇಫಿಕ್ರೆ’ ಎರಡೂ ಚಿತ್ರಗಳಲ್ಲಿ ಆಕೆಯ ನಟನೆ ಇಷ್ಟವಾಗಿದೆ. ಹಾಗಾಗಿ ಅವಳೇ ಚಿತ್ರದ ನಾಯಕಿ” ಎಂದು ಈ ವಿಷಯವನ್ನು ಕನ್ಫರ್ಮ್ ಮಾಡಿದ್ದಾರೆ. ಆದಿತ್ಯಾ ಚೋಪ್ರಾ `ಬೇಫಿಕ್ರೆ’ ಚಿತ್ರ ನಿರ್ದೇಶಿಸಿರುವುದರಿಂದ ವಾಣಿ ಅವರ ಫೇವರಿಟ್ ನಟಿಯರಲ್ಲಿ ಒಬ್ಬಳು ಕೂಡಾ.

ಹೃತಿಕ್ `ಧೂಮ್ 2′ ಚಿತ್ರದ ನಂತರ ವೈಆರ್‍ಎಫ್ ಕ್ಯಾಂಪಿಗೆ ಮರಳುತ್ತಿದ್ದರೆ ಟೈಗರ್ ಮೊದಲ ಬಾರಿ ಈ ಬ್ಯಾನರಿನ ಚಿತ್ರದಲ್ಲಿ ನಟಿಸಲಿದ್ದಾನೆ. ಸಿನಿಮಾ 2019 ಜನವರಿ25ಕ್ಕೆ ಈ ಸಿನಿಮಾ ರಿಲೀಸ್ ಎಂದು ಈಗಾಗಲೇ ಶೆಡ್ಯೂಲ್ ಆಗಿದೆ.