ಕರಾಳ ರಾತ್ರಿಯಲ್ಲಿ ಜೆಕೆ ಜೊತೆ ವೈಷ್ಣವಿ, ಅನುಪಮ ಗೌಡ

`ಬಿಗ್ ಬಾಸ್’ ಮನೆಗೆ ಹೋದವರೆಲ್ಲರ ಅದೃಷ್ಟ ಖುಲಾಯಿಸಿದ ಹಾಗೆ ಕಾಣುತ್ತಿದೆ. ಕೆಲವರಿಗೆ ಸಿನಿಮಾಗಳಲ್ಲಿ ಆಫರ್ ಸಿಕ್ಕರೆ ಉಳಿದವರೂ ಈಗ ರಿಯಾಲಿಟಿ ಶೋಗಳಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಸ್ಪರ್ಧಿಗಳಾದ ಜೆಕೆ, ಅನುಪಮ ಹಾಗೂ ವೈಷ್ಣವಿ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಡೈರೆಕ್ಟರ್ ದಯಾಳ್ ಪದ್ಮಾನಾಭನ್ ಚಿತ್ರದಲ್ಲಿ ಈ ಮೂವರೂ ಜೊತೆಯಾಗುತ್ತಿದ್ದಾರೆ.

ದಯಾಳ್ ಪದ್ಮನಾಭನ್ `ಆ ಕರಾಳ ರಾತ್ರಿ’ ಹಾಗೂ `ಪುಟ 109′ ಎನ್ನುವ ಎರಡು ಚಿತ್ರಗಳನ್ನು ಡೈರೆಕ್ಟ್ ಮಾಡಲಿದ್ದು ಅವೆರಡೂ ಫೆ 19 ರಂದು ಸೆಟ್ಟೇರಲಿವೆ. `ಆ ಕರಾಳ ರಾತ್ರಿ’ ಚಿತ್ರದಲ್ಲಿ ಜೆ ಕೆ , ಅನುಪಮಗೌಡ ಹಾಗೂ ವೈಷ್ಣವಿ ಜೊತೆಯಾಗುತ್ತಿದ್ದಾರೆ. ಜೊತೆಯಲ್ಲಿ ನವೀನ್ ಕೃಷ್ಣ, ರಂಗಾಯಣ ರಘು ಮತ್ತು ವೀಣಾ ಸುಂದರ್ ಮೊದಲಾದವರೂ ಅಭಿನಯಿಸುತ್ತಿದ್ದಾರೆ. ಈ ಚಿತ್ರವೊಂದು ಸತ್ಯ ಘಟನೆಯಾಧರಿತ ಸಿನಿಮಾವಂತೆ.

LEAVE A REPLY