ಕಣಿಪುರ ಕ್ಷೇತ್ರದಿಂದ ಸಾಮಗ್ರಿ ಕಳವಿಗೆ ಯತ್ನ

ಕ್ಷೇತ್ರದ ಮುಂದೆ ಜಮಾಯಿಸಿದ ಜನರು ಮೆಟ್ಟಲು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರಕ್ಕೆ ನುಗ್ಗಿದ ಕಳ್ಳರು ಸಾಮಗ್ರಿ ಅಪಹರಿಸಲು ಯತ್ನಿಸಿ ವಿಫಲಗೊಂಡಿದ್ದಾರೆ.

ದ್ವಾರಪಾಲಕ ಪ್ರತಿಮೆಗಳ ಕವಚಗಳನ್ನು ತೆಗೆದಿಟ್ಟಿರುವುದು

ಗುರುವಾರ ಮುಂಜಾನೆ 3 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ. ಗರ್ಭಗುಡಿ ಬಾಗಿಲು ಮುರಿದು ಕಾಣಿಕೆ ಡಬ್ಬಿಯ ಬೀಗ ಮುರಿಯಲು ಕಳ್ಳರು ಯತ್ನಿಸಿದ್ದಾರೆ. ಅದರೆ ಅದು ವಿಫಲಗೊಂಡಾಗ ಗರ್ಭಗುಡಿಯ ಮೆಟ್ಟಲಿಗೆ ಹೊದಿಸಿದ ಬೆಳ್ಳಿಯ ಕವಚವನ್ನು ಎಬ್ಬಿಸಿ ಕೊಂಡೊಯ್ಯಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಮುಂಜಾನೆ 3 ಗಂಟೆಗೆ ಅರ್ಚಕರು ಬಾಗಿಲು ತೆರೆದು ಒಳಪ್ರವೇಶಿಸುತಿದ್ದಂತೆಯೇ ಕಳ್ಳರು ಓಡಿ ಪರಾರಿಯಾಗಿದ್ದಾರೆ. ಕ್ಷೇತ್ರದಲ್ಲಿ ಕಾವಲುಗಾರನಿದ್ದರೂ ಕಳ್ಳ ಕ್ಷೇತ್ರಕ್ಕೆ ನುಗ್ಗಿರುವುದು ಅರಿವಿಗೆ ಬಂದಿಲ್ಲವೆನ್ನಲಾಗಿದೆ. ಕ್ಷೇತ್ರ ಸಮೀಪದ ಸ್ನಾನ ಕೊಠಡಿಯ ಮೇಲೇರಿ ಅಲ್ಲಿಂದ ಕ್ಷೇತ್ರದ ಸುತ್ತು ಗೋಪುರದ ಛಾವಣಿಗೆ ಇಳಿದಿರಬಹುದಾಗಿ ಶಂಕಿಸಲಾಗಿದೆ. ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಪೆÇಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.