ಉಳ್ಳಾಲ ಪ್ಲ್ಯಾಟಲ್ಲಿ ಕಳವಿಗೆ ಯತ್ನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶೌಚಾಲಯದ ಗಾಜು ಒಡೆದು ಪ್ಲ್ಯಾಟಿನೊಳಗೆ ನುಗ್ಗಲು ಯತ್ನಿಸಿದ ಕಳ್ಳನೊಬ್ಬ ಮನೆ ಮಂದಿ ಗೊಬ್ಬೆ ಹಾಕಿದ್ದರಿಂದ ಪರಾರಿಯಾಗಿದ್ದಾನೆ.

ತೊಕ್ಕೊಟ್ಟಿನ ಸ್ಮಾರ್ಟ್ ಪ್ಲಾನೆಟ್ ಎಂಬ ವಸತಿ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ.

ವಸತಿ ಸಂಕೀರ್ಣದ 402 ಸಂಖ್ಯೆಯ ಕೊಠಡಿಯಲ್ಲಿ ಗಾಜು ಒಡೆಯುವ ಸದ್ದು ಕೇಳಿದ ಹಿನ್ನೆಲೆಯಲ್ಲಿ ಮನೆ ಮಂದಿ ಬಂದು ನೋಡಿದಾಗ, ಶೌಚಾಲಯದ ಗಾಜು ಒಡೆದು ವ್ಯಕ್ತಿಯೊಬ್ಬ ಮನೆಯೊಳಗೆ ನುಸುಳುವ ಯತ್ನ ಮಾಡುತ್ತಿದ್ದ. ಮನೆ ಮಂದಿ ಕೂಡಲೇ ಬೊಬ್ಬೆ ಹೊಡೆದಿದ್ದಾರೆ.

ಇದರಿಂದ ವಿಚಲಿತನಾದ ಕಳ್ಳ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ.