ಕ್ರಿಕೆಟ್ ಮೈದಾನದಲ್ಲಿ ಖಾದರ್ ಭರ್ಜರಿ ಆಟ

ಭರ್ಜರಿ ಆಟ ಆಡಿದ ಯು ಟಿ ಖಾದರ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಖಾಸಗಿ ಭೇಟಿಗೆ ಕಾಸರಗೋಡಿಗೆ ತೆರಳಿದ್ದ ಕರ್ನಾಟಕ ಆಹಾರ ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ತನ್ನ ಆಪ್ತ ಮಿತ್ರರು ಹಮ್ಮಿಕೊಂಡಿದ್ದ ತಳಂಗೆರೆ ಕ್ರಿಕೆಟ್ ಪಂದ್ಯಾಟದ ಗ್ರೌಂಡಿಗೆ ಭೇಟಿ ಕೊಟ್ಟಾಗ ಅಲ್ಲಿ ನಡೆಯುತ್ತಿದ್ದ ಪ್ರದರ್ಶನ ಪಂದ್ಯದಲ್ಲಿ ಕ್ರಿಕೆಟ್ ಆಡುವಂತೆ ಅಭಿಮಾನಿಗಳು ಕೇಳಿಕೊಂಡಾಗ ನೀಲಿ ಬಣ್ಣದ ಜೆರ್ಸಿ ಧರಿಸಿ, ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದೇ ಬಿಟ್ಟರು ಯು ಟಿ ಖಾದರ್.

ನಂತರದ ಪ್ರತಿಯೊಂದು ಕ್ಷಣವೂ ರೋಮಾಂಚನ. ಕ್ರೀಸಿನಲ್ಲಿ ಖಾದರ್ ಅಬ್ಬರದ ಆಟ ಕಂಡು ಪ್ರೇಕ್ಷಕರು ಕುಣಿದಾಡಿದರು. ಖಾದರ್ ಅಬ್ಬರದ ಆಟದಿಂದ ತಂಡಕ್ಕೆ ರೋಮಾಂಚನಕಾರಿ ಗೆಲುವು ಕೂಡಾ ದಕ್ಕಿತು. ಕೇವಲ 6 ನಿಮಿಷದಲ್ಲಿ ಭರ್ಜರಿ ಆಟ ಪ್ರದರ್ಶಿಸಿ `ಮ್ಯಾನ್ ಆಫ್ ದಿ ಮ್ಯಾಚ್’ ಗಿಟ್ಟಿಸಿಕೊಂಡು ತಳಂಗೆರೆ ಮಾಲಿಕ್ ದೀನಾರ್ ಮಸೀದಿಯ ಮೈದಾನದಲ್ಲಿ ಖಾದರ್ ಇತಿಹಾಸ ಸೃಷ್ಟಿಸಿದರು.