ಮೊಬೈಲ್ ಬಳಸುವಾಗ ಬುದ್ಧಿವಂತಿಕೆ ಬೇಕು

ಹದಿನೈದು ಹದಿನಾರು ವರ್ಷ ದಾಟಿದವರಿಗೆ ಮೊಬೈಲ್ ಅನಿವಾರ್ಯವಾಗುತ್ತದೆ ಅವರು ವಾಸಿಸುವ ಸ್ಥಳ ಓದುವ ಕಾಲೇಜ್ ಟ್ಯೂಷನ್ ಮಾಡುವ ಸ್ಥಳ ಅಥವಾ ಬೇರಾವುದೇ ಕೋರ್ಸ್ ಕೆಲಸ ಮಾಡುವ ಊರು ಹೀಗೆ ಅವರು ತಮ್ಮವರಿಂದ ದೂರ ಉಳಿಯುವ ಸಂದರ್ಭಗಳು ಬರುತ್ತದೆ. ಇಂದಿನ ನಿತ್ಯ ಬದುಕು ತಂತ್ರಜ್ಞಾನದ ಮೇಲೆ ನಿಂತಿದೆ ಎಂದರೂ ತಪ್ಪಾಗಲಾರದು. ಈ ಸ್ಪರ್ಧಾತ್ಮಕ ಯುಗದ ವೇಗದ ಬದುಕಿನಲ್ಲಿ ಯಾವುದೇ ಕ್ಷಣದಲ್ಲಿ ಯಾವುದೇ ಅನಾಹುತಗಳು ಸಂಭವಿಸಬಹುದು. ಸಮಸ್ಯೆಗಳು ಎದುರಾಗಬಹುದು. ಜತೆಗೆ ಮೊಬೈಲ್ ಇದ್ದರೆ ನೂರಾರು ಕೆಲಸಗಳು ಟನ್ಷನ್ ಇಲ್ಲದೇ ಕುಳಿತಲ್ಲೇ ಆಗಿ ಬಿಡುತ್ತದೆ ಮೊಬೈಲ್ ಕೈಯಲ್ಲಿದ್ದರೆ ಒಂದು ರೀತಿ ಧೈರ್ಯವೂ ಸಹ ಇರುತ್ತದೆ. ಆದರೆ ಮೊಬೈಲನ್ನು ಸಮಪರ್ಕವಾಗಿ ಬಳಸುವುದು ಮುಖ್ಯ ಅನಗತ್ಯ ಕಾಲ್ ಮೆಸೇಜ್ ಕಳಿಸಿ ಭವಿಷ್ಯವನ್ನೇ ಮಂಕಾಗಿಸಿಕೊಂಡವರಿದ್ದಾರೆ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡದೆ ಜವಾಬ್ದಾರಿಯಿಂದ ಬುದ್ಧಿವಂತಿಕೆಯಿಂದ ಬಳಸಿದಾಗ ಮಾತ್ರ ಮೊಬೈಲ್ ಒಳ್ಳೆಯ ಸ್ನೇಹಿತನಂತಿರುವುದು ಸತ್ಯ ತಾನೇ

  • ನಿರಂಜನ್ ಸುವರ್ಣ  ಕನ್ನಂಗಾರು ಹೆಜಮಾಡಿ