ಪಂಚತಾರಾ ಹೋಟೆಲಲ್ಲಿ ಅಮೆರಿಕ ಮಹಿಳೆಯ ಸಾಮೂಹಿಕ ಅತ್ಯಾಚಾರ

ಸಾಂದರ್ಭಿಕ ಚಿತ್ರ

ನವದೆಹಲಿ : ಇಲ್ಲಿನ ಕನ್ನಟ್ ಪ್ಲೇಸಿನ ಪಂಚತಾರಾ ಹೋಟೆಲೊಂದರಲ್ಲಿ ಪ್ರವಾಸಿಗರ ಮಾಗದರ್ಶಿಯೊಬ್ಬನ ಸಹಿತ ಐವರು ಸೇರಿ ಅಮೆರಿಕದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯೊಂದು ತಡವಾಗಿ ವರದಿಯಾಗಿದೆ.

ಅಮೆರಿಕ ಮಹಿಳೆಯಿಂದ ಇ-ಮೇಲ್ ಮೂಲಕ ದೂರು ಸ್ವೀಕರಿಸಲಾಗಿದೆ. ಎಫ್ ಐ ಆರ್ ದಾಖಲಾದಲ್ಲಿ ತಾನು ವಿಚಾರಣೆ ವೇಳೆ ಹೇಳಿಕೆ ನೀಡಲು ದಿಲ್ಲಿಗೆ ಬರಲಿದ್ದೇನೆಂದು ಆಕೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.

2016 ಮಾರ್ಚಿನಲ್ಲಿ ತಾನು ಪ್ರವಾಸಿ ವೀಸಾದಲ್ಲಿ ದಿಲ್ಲಿಗೆ ಆಗಮಿಸಿದ್ದು, ಕನ್ನಟ್ ಪ್ಲೇಸಿನ ಹೋಟಲಿನಲ್ಲಿ ತಂಗಿದ್ದೆ. ಹೋಟೆಲ್ ಅಧಿಕಾರಿಗಳ ಸಲಹೆಯಂತೆ ಆಕೆ ಏಜೆನ್ಸಿಯೊಂದರ ಪ್ರವಾಸಿ ಮಾರ್ಗದರ್ಶಕರೊಬ್ಬರನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಆತ ನಗರ ಸುತ್ತಾಡಿಸಿದ್ದ. ಒಂದು ದಿನ ತನ್ನ ರೂಮಿಗೆ ಆಗಮಿಸಿದ್ದ ಮಾರ್ಗದರ್ಶಿ ಹಾಗೂ ಆತನ ನಾಲ್ವರು ಗೆಳೆಯರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ದೂರಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದರು.