ಆಫ್ಘಾನ್ : ಐ ಎಸ್ ಕಟ್ಟಡದ ಮೇಲೆ ಅಮೆರಿಕದ ಶಕ್ತಿಶಾಲಿ ಬಾಂಬ್ ದಾಳಿ

ವಾಷಿಂಗ್ಟನ್ : ಅಮೆರಿಕ ಪಡೆಯು ನಿನ್ನೆ ತನ್ನ ಅತಿ ಶಕ್ತಿಶಾಲಿ ಬಾಂಬುಗಳ (ಎಲ್ಲ ಬಾಂಬುಗಳ ತಾಯಿ) ಮೂಲಕ ಪೂರ್ವ ಆಫ್ಘಾನಿಸ್ತಾನದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಟನಲ್ ಕಾಂಪ್ಲೆಕ್ಸೊಂದರ (ಟನಲ್ ಕಟ್ಟಡ) ಮೇಲೆ ದಾಳಿ ನಡೆಸಿದೆ. ಈ ದಾಳಿ ವೇಳೆ ಅಮೆರಿಕ ಸೇನೆ ಜಿಬಿಯು-43ಬಿ ಅಥವಾ ಗಾಳಿಯಲ್ಲಿ ಸ್ಫೋಟಗೊಳ್ಳುವ ಬಾಂಬೊಂದನ್ನು ಸ್ಫೋಟಿಸಿದೆ. ಇದರಲ್ಲಿ ಹೆಚ್ಚುಕಮ್ಮಿ 11 ಟನ್ ಸ್ಫೋಟಕ ತುಂಬಿರುತ್ತದೆ.