ಥ್ರಿಲ್ಲರ್ ಚಿತ್ರದಲ್ಲಿ ಊರ್ವಶಿ ರುಟೇಲ

`ಸನಂ ರೇ’, `ಗ್ರೇಟ್ ಗ್ರ್ಯಾಂಡ್ ಮಸ್ತಿ’ ಚಿತ್ರದಲ್ಲಿ ನಟಿಸಿದ್ದ ಊರ್ವಶಿ ರುಟೇಲ ಮತ್ತೆ ಕಾಣಿಸಿಕೊಂಡಿದ್ದು ಹೃತಿಕ್ ರೋಷನ್ ಚಿತ್ರ `ಕಾಬಿಲ್’ನಲ್ಲಿ ಐಟೆಂ ಡ್ಯಾನ್ಸರ್ ಆಗಿ ಮಾತ್ರ. ಇದೀಗ ಈ ಸುಂದರ ಬೆಡಗಿ ಥ್ರಿಲ್ಲರ್ ಚಿತ್ರವೊಂದರಲ್ಲಿ ನಟಿಸುವುದು ಪಕ್ಕಾ ಆಗಿದೆ. ಈ ಸಿನಿಮಾವನ್ನು ವಿಶಾಲ್ ಮಿಶ್ರಾ ನಿರ್ದೇಶಿಸುತ್ತಿದ್ದು ಇದೊಂದು ಮಹಿಳಾ ಪ್ರಧಾನವಾದ ಚಿತ್ರವಾಗಿದೆ. ವಿಶಾಲ್ ಈ ಮೊದಲು `ಕಾಫಿ ವಿದ್ ಡಿ’ ಎನ್ನುವ ಚಿತ್ರ ನಿರ್ದೇಶಿಸಿದ್ದರು.

ಅಂದ ಹಾಗೆ ಊರ್ವಶಿ ರುಟೇಲಾ ಕನ್ನಡದಲ್ಲಿ ದರ್ಶನ್ ಜೊತೆಗೆ `ಮಿ ಐರಾವತ’ ಚಿತ್ರದಲ್ಲಿ ಕೂಡಾ ಈ ಮೊದಲು ನಟಿಸಿದ್ದಳು. ಊರ್ವಶಿ ಮಾಡೆಲ್ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಆಕೆ 2015ರಲ್ಲಿ `ಮಿಸ್ ದಿವಾ’ ಕಿರೀಟ ತೊಟ್ಟಿದ್ದಳು. ಅದಲ್ಲದೇ ಆಕೆ ಅದೇ ವರ್ಷ `ಮಿಸ್ ಯೂನಿವರ್ಸ್’ ಸ್ಪರ್ಧೆಯಲ್ಲಿ ಕೂಡಾ ಭಾರತವನ್ನು ಪ್ರತಿನಿಧಿಸಿದ್ದಳು.