ರಾ ಹೆದ್ದಾರಿ ದುರಸ್ತಿ ಆಗ್ರಹಿಸಿ ಅರೆ ಬೆತ್ತಲೆ ಉರುಳು ಸೇವೆ

ಉಡುಪಿ : ಮಣಿಪಾಲದ ರಾಷ್ಟ್ರೀಯ ಹೆದ್ದಾರಿ 169 ಎ, ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾದ ಕಾರಣದಿಂದಾಗಿ ರಸ್ತೆ ದುರಸ್ತಿಗೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳು ಸೇವೆ ಮುಖಾಂತರ ನಾಗರಿಕ ಸೇವಾ ಸಮಿತಿ ಸಂಘ-ಸಂಸ್ಥೆಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಾಗುಂಡಿಗಳು ಮಾರ್ಪಟ್ಟರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಪ್ರತಿಷ್ಠಿತ ಆಸ್ಪತ್ರೆ ಮಣಿಪಾಲದಲ್ಲಿ ಇರುವುದರಿಂದ ರೋಗಿಗಳನ್ನು, ಗಾಯಾಳುಗಳನ್ನು ಸಾಗಿಸುವಾಗ ದುರ್ಘಟನೆಗಳು ಸಂಭವಿಸುವ ಸಾದ್ಯತೆಗಳು ಹೆಚ್ಚಾಗಿವೆ. ರಸ್ತೆಯ ಅವ್ಯವಸ್ಥೆಯ ಕುರಿತು ಈ ಹಿಂದೆ ಸಾಕಷ್ಟು ಮನವಿಗಳು ಸಂಘ-ಸಂಸ್ಥೆಗಳಿಂದ ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಕೆಯಾಗಿವೆ. ಮನವಿಗಳಿಗೆ ಸ್ಪಂದನೆ ದೊರೆಯದ ಕಾರಣ, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಸ್ತೆಯಲ್ಲಿ ಸ್ವಯಂ ನಿರ್ಮಾಣವಾದ ನೀರು ನಿಂತ ಗುಂಡಿಯಲ್ಲಿ ಈಜು ಮೂಖಾಂತರ, ತಾರಾನಾಥ್ ಮೇಸ್ತರು ಗಾಳಗಾರಿಕೆ ಅಣುಕು ಪ್ರದರ್ಶಿಸುವ ಮೂಖಾಂತರ ರಸ್ತೆ ದುರಸ್ತಿಗೆ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಆ ಸಂದರ್ಭ ತಕ್ಷಣ ಸ್ಪಂದಿಸಿದ ಅಧಿಕಾರಿಗಳು ಜಲ್ಲಿ ಹುಡಿ ಹಾಕಿ ತಾತ್ಕಲಿಕ ರಸ್ತೆ ದುರಸ್ದಿಗೊಳಿಸಿದ್ದರು. ಈಗ ಜಲ್ಲಿ ಹುಡಿ ಧೂಳು ಎಬ್ಬಿಸಿ, ಪರಿಸರ ಎಲ್ಲ ಕಲ್ಮಶವಾಗಿದೆ. ಕಣ್ಣಿನ ತೊಂದರೆಗಳೆಗೆ ಅಸ್ತಮ, ಶ್ವಾಸಕೋಶಕ್ಕೆ ಸಂಬಂಧಿದ ಕಾಯಿಲೆಗಳಿಗೆ ಸಾರ್ವಜನಿಕರು ತುತ್ತಾಗುತ್ತಿದ್ದರು.

ಸಮಸ್ಯೆಯ ಸರಮಾಲೆಯಿಂದ ರೋಸಿ ಹೋದ ಸಾರ್ವಜನಿಕರು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ. ಸ್ಪಂದಿಸಿದ ನಿತ್ಯಾನಂದ ಒಳಕಾಡು ಅವರು ರಿಕ್ಷಾ ಚಾಲಕ ಮಾಲಕರ ಸಂಘ, ಟ್ಯಾಕ್ಷಿ ಚಾಲಕ ಮಾಲಕರ, ಕಾಲೇಜು ವಿದ್ಯಾರ್ಥಿಗಳ, ನಾಗರಿಕರ ಬೆಂಬಲ ಸಹಕಾರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಜಲ್ಲಿ ಕಲ್ಲುಗಳು ಎದ್ದ ಧೂಳುಮಯವಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯಾನಂದ ಒಳಕಾಡು ಅವರು ಅರ್ಧ ತಾಸಿನವರೆಗೂ ಅರೆ ಬೆತ್ತಲೆಯಲ್ಲಿ ಉರುಳು ಸೇವೆ ನಡೆಸಿದ್ದಾರೆ. ರಾಜೇಶ್ ರೋಗಿಯಾಗಿ, ಆಮ್ಮಜನಕ ಅಂಡೆ ಅಳವಡಿಸಿದ ತಳ್ಳು ಗಾಡಿಯಲ್ಲಿ ಮಲಗಿ, ರಿಕ್ಷಾ ಚಾಲಕರು ಗಾಡಿಯನ್ನು ತಳ್ಳುತ, ರಂಗಭೂಮಿ ಕಲಾವಿದ ಶ್ರೀಪಾದ್ ಭಟ್ ರೋಗಿಯ ಪ್ರಾಣ ಉಳಿಸಲು ಗೋಳಿಡುತ್ತ ಅಣಕು ಪ್ರದರ್ಶಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ನಿತ್ಯಾನಂದ ಒಳಕಾಡು ಅವರು, “ಅಧಿಕಾರಿಗಳೇ, ಜನಪ್ರತಿನಿ ಧಿಗಳೇ ಜನರ ಪ್ರಾಣದ ಜೊತೆ ಚಲ್ಲಾಟ ಆಡಬೇಡಿ, ಆದಷ್ಟು ಬೇಗ ರಸ್ತೆ ದುರಸ್ತಿ ಪಡಿಸಿ, ಇಲ್ಲಾವೆಂದಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಸಿದ್ದಾರೆ.