ಯುಪಿಎಸ್ ಕದ್ದು ಕಳ್ಳರು ಪರಾರಿ

?????????????????????????????????????????????????????????

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಇಲ್ಲಿನ ಪಟ್ಟಣದ ಬಂದರ್ ರಸ್ತೆಯ 1ನೇ ಕ್ರಾಸ್ ಬಳಿಯ ಮನೆಯೊಂದರಲ್ಲಿನ ಯುಪಿಎಸ್ಸನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಮುಹಮ್ಮದ್ ಹುಸೇನ್ ಬೆಳ್ನಿ ಎಂಬಾತರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯ ಮಾಲಿಕರು ಕುಟುಂಬ ಸಮೇತರಾಗಿ ದುಬೈಯಲ್ಲಿ ವಾಸವಾಗಿದ್ದರು. ಸದ್ಯ ಮನೆಯನ್ನು ಅವರ ಸಂಬಂಧಿಕರು ಮನೆಯನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದ್ದು, ದಿನಾಲು ಒಂದು ಬಾರಿ ಮನೆಯನ್ನು ನೋಡಿಕೊಂಡು ಹೋಗುತ್ತಿದ್ದರು. ಅದೇ ರೀತಿ ರವಿವಾರದಂದು ಮನೆಯನ್ನು ನೋಡಲು ಹೋದಾಗ ಮನೆಯ ಹಿಂಬದಿ ಗಾಳಿ ಆಡಲು ಬಿಟ್ಟಿರುವ ಕಿಟಕಿಯ ಜಾಲಿ ಮುರಿದು ಬಿದ್ದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮನೆಯ ಒಳಹೊಕ್ಕು ನೋಡಿದಾಗ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿಕೊಂಡಿದ್ದು ಹಾಗೆಯೇ ಕಂಪ್ಯೂಟರಿಗೆ ಅಳವಡಿಸಿರುವ ಯುಪಿಎಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ ಎಂದಿದೆ ಕುಟುಂಬ ಮೂಲಗಳು ತಿಳಿಸಿವೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ. ತನಿಖೆ ಮುಂದುವರೆದಿದೆ.

LEAVE A REPLY