ಉಪ್ಪಿನಂಗಡಿ ಸ್ವಚ್ಛ ಆಗಬೇಕಿದೆ

ಉಪ್ಪಿನಂಗಡಿ ಹೊಸ ರೂಪ ತಾಳಲು ಜನಪ್ರತಿನಿಧಿಗಳು ಈತನಕವೂ ಸ್ಪಷ್ಟ ಯೋಜನೆ ಅನುಷ್ಠಾನ ಮಾಡಿಲ್ಲ. ಜನನಿಬಿಡ ರಸ್ತೆಗಳಲ್ಲಿ ವಾಹನ ತಂಗುದಾಣ ಇಲ್ಲ. ಬೇಕಾಬಿಟ್ಟಿ ಅಂಗಡಿ ಮುಂಗಟ್ಟುಗಳು, ರಸ್ತೆಯ ಇಕ್ಕೆಲಗಳಲ್ಲಿ ಕಸಕಡ್ಡಿ ತಾಜ್ಯ ಶೇಖರಣೆಗೆ ಕಡಿವಾಣ ಹಾಕುವವರಿಲ್ಲ. ಉಪ್ಪಿನಂಗಡಿ ವ್ಯಾಪ್ತಿಯ ಹಲವಾರು ಗ್ರಾಮ ಪಂಚಾಯತ್ ಅಧಿಕಾರಿಗಳೂ ಸ್ವಚ್ಛತೆ, ಸುರಕ್ಷಿತತೆ, ಆರೋಗ್ಯ, ನೈರ್ಮಲ್ಯಕ್ಕಾಗಿ ರಸ್ತೆ ಸಂಚಾರ ಅವ್ಯವಸ್ಥೆ ಸರಿಪಡಿಸಲು ಸರಕಾರದ ನಿಯಮಾವಳಿ ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಮಾದಕದ್ರವ್ಯದ ಹಾವಳಿಯೂ ಮದ್ಯವ್ಯಸನಿಗಳ ತಾಣವಾಗುತ್ತಿರುವ ಉಪ್ಪಿನಂಗಡಿ ಪರಿಸರದಲ್ಲಿ ವಿದ್ಯಾರ್ಥಿನಿ ವಿದ್ಯಾರ್ಥಿನಿಯರಿಗೆ ಕಿರುಕುಳ  ಬೀದಿಪುಂಡರ ಹಾವಳಿಯೂ ಇದೆ

  • ನಾರಾಯಣ ಕೆ  ಉಪ್ಪಿನಂಗಡಿ