ಆದ್ಯತಾ ಪಟ್ಟಿಯಲ್ಲಿ ಉಪ್ಪಳ ಪೆÇಲೀಸ್ ಠಾಣೆ : ಪಿಣರಾಯಿ

ನಮ್ಮ ಪ್ರತಿನಿಧಿ ವರದಿ

ಕುಂಬಳೆ : ಉಪ್ಪಳದಲ್ಲಿ ಪೆÇಲೀಸ್ ಠಾಣೆ ಸ್ಥಾಪಿಸುವ ಬಗ್ಗೆ ವಿಳಂಬ ನೀತಿ ಅನುಸರಿಸುವುದಿಲ್ಲ. ಅದು ಸರಕಾರದ ಆದ್ಯತಾ ಯಾದಿಯಲ್ಲೇ ಒಳಗೊಂಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಉಪ್ಪಳದಲ್ಲಿ ಪೆÇಲೀಸ್ ಠಾಣೆ ಸ್ಥಾಪಿಸುವ ಕುರಿತು ಅಗತ್ಯದ ಯೋಜನೆಗೆ ರೂಪು ನೀಡಿ ವರದಿ ಸಲ್ಲಿಸುವಂತೆ ರಾಜ್ಯ ಪೆÇಲೀಸ್ ಮಹಾ ನಿರ್ದೇಶಕರಿಗೆ ಆದೇಶ ನೀಡಲಾಗಿದೆ. ಉಪ್ಪಳದಲ್ಲಿ ಪೆÇಲೀಸ್ ಠಾಣೆ ಸ್ಥಾಪಿಸುವ ವಿಷಯದಲ್ಲಿ ಸರಕಾರ ವಿಳಂಬ ನೀತಿ ಅನುಸರಿಸುವುದರ ಬಗ್ಗೆ ಮಂಜೇಶ್ವರ ಶಾಸಕ ಪಿ ಬಿ ಅಬ್ದುಲ್ ರಜಾಕ್ ವಿಧಾನಸಭೆಯಲ್ಲಿ ಮಂಡಿಸಿದ ಪ್ರಶ್ನೆಗೆ ಉತ್ತರಿಸುತ್ತಾ ಮುಖ್ಯಮಂತ್ರಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ತಾಗಿಕೊಂಡಿರುವ ಗಡಿ ಪ್ರದೇಶವಾದ ಮಂಜೇಶ್ವರ ತಾಲೂಕಿನಲ್ಲಿ ಕ್ರಿಮಿನಲ್ ತಂಡಗಳ ದಾಳಿಗಳು ಇತ್ತೀಚೆಗಿನಿಂದ ಹೆಚ್ಚಾಗುತ್ತಿದೆ. ಈ ಪ್ರದೇಶದಲ್ಲಿ ಪದೇಪದೇ ಗೂಂಡಾ ಆಕ್ರಮಣಗಳು ಮತ್ತು ಕೊಲೆಗಳು ನಡೆಯುತ್ತಿವೆ. ಇದು ಜನರನ್ನು ಭಯಗ್ರಸ್ತರನ್ನಾಗಿಸಿದೆ ಎಂದು ಸದನದಲ್ಲಿ ಮಂಡಿಸಿದ ಗೊತ್ತುವಳಿಯಲ್ಲಿ ಶಾಸಕರು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದಾರೆ.

ಮಂಜೇಶ್ವರ ಪೆÇಲೀಸ್ ಠಾಣೆ ವಿಶಾಲ ವ್ಯಾಪ್ತಿ ಹೊಂದಿದ ಪ್ರದೇಶವಾಗಿದೆ. ಅದರಿಂದಾಗಿ ಪೆÇಲೀಸರಿಗೆ ಸಕಾಲಿಕವಾಗಿ ಇತರ ಪ್ರದೇಶಗಳಿಗೆ ಸಾಗಲು ಸಾಧ್ಯವಾಗದ ಸ್ಥಿತಿ ಇದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ ಪೆÇಲೀಸರು ಅಮಿತ ಕೆಲಸದ ಹೊರೆಯನ್ನು ಹೊಂದಿದ್ದು, ಉಪ್ಪಳದಲ್ಲಿ ಪೆÇಲೀಸ್ ಠಾಣೆ ಆರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಗೊತ್ತುವಳಿಯಲ್ಲಿ ಆಗ್ರಹಿಸಿದ್ದಾರೆ.