ಉಪೇಂದ್ರ ಅಣ್ಣನ ಮಗ ಸ್ಯಾಂಡಲ್ವುಡ್ಡಿಗೆ

ಇದೀಗ ಒಬ್ಬೊಬ್ಬರೇ ಹೊಸ ಹುಡುಗರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದೂ ಚಿತ್ರರಂಗದಲ್ಲಿರುವ ಸಂಬಧೀಕರು ಬಣ್ಣದ ಲೋಕಕ್ಕೆ ಎಂಟ್ರಿ ಹೊಡಯಲು ಕಾತರರಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ `ರೋಗ್’ ಚಿತ್ರದ ನಿರ್ಮಾಪಕರ ಮಗ ಇಶಾನ್ ಗಾಂಧೀನಗರಕ್ಕೆ ಎಂಟ್ರಿ ಹೊಡೆದ ಬೆನ್ನಲ್ಲೇ ಈಗ ರಿಯಲ್ ಸ್ಟಾರ್ ಉಪೇಂದ್ರನ ಅಣ್ಣ ಸುರೇಂದ್ರರ ಮಗ ನಿರಂಜನ್ ಬಣ್ಣದ ಲೋಕಕಕ್ಕೆ ಕಾಲಿಡುತ್ತಿದ್ದಾನೆ.

ಸುರಸುಂದರನಾಗಿರುವ ನಿರಂಜನ್ ಈಗ ಓದು ಮುಗಿಸಿ ಬಣ್ಣ ಹಚ್ಚಲು ಸಿದ್ಧನಾಗುತ್ತಿದ್ದಾನೆ. ಈಗಾಗಲೇ ನಿರಂಜನ್ ಫೆÇೀಟೋಶೂಟ್ ಮಾಡಲಾಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಹೊಸಬರಾದ ಯೋಗಿ ದೇವಗಂಗೆ ನಿರ್ದೇಶಿಸುತ್ತಿದ್ದಾರೆ. ಇದೇ ತಿಂಗಳು 10ರಂದು ಚಿತ್ರೀಕರಣ ಶುರುವಾಗಲಿದೆಯಂತೆ.. .

ಅಂದ ಹಾಗೆ ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಪೆÇಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾಳೆ.