`3-ಈಡಿಯಟ್ಸ್’ ರಿಮೇಕಿನಲ್ಲಿ ಉಪೇಂದ್ರ

2009 ರಲ್ಲಿ ಬಿಡುಗಡೆ ಆದ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಸೂಪರ್ ಹಿಟ್ ಚಿತ್ರ `3 ಈಡಿಯಟ್ಸ್’ ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು ಇದರಲ್ಲಿ ಅಮೀರ್ ಖಾನ್ ಪಾತ್ರದಲ್ಲಿ ಉಪೇಂದ್ರ ನಟಿಸುತ್ತಾರೆ ಎನ್ನುವ ಸುದ್ದಿಯೀಗ ಗಾಂಧೀನಗರದಲ್ಲಿ ಹರಡಿದೆ. ರೀಮೇಕ್ ಚಿತ್ರಗಳ ಮೂಲಕವೇ ಫೇಮಸ್ ಆಗಿರುವ ಕನ್ನಡದ ನಿರ್ದೇಶಕ ಕೆ.ಮಾದೇಶ್ `3 ಈಡಿಯಟ್ಸ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರಂತೆ.

ಚಿತ್ರದ ಕರೀನಾ ಕಪೂರ್ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸಲಿದ್ದಾಳೆ ಎನ್ನಲಾಗಿದೆ. ಇತರ ಪಾತ್ರಗಳು ಫೈನಲ್ ಆಗಿಲ್ಲವಂತೆ. ಸದ್ಯವೇ ಚಿತ್ರಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ.

ಸದ್ಯಕ್ಕೆ ಉಪೇಂದ್ರ `ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ’, ಚಿತ್ರೀಕರಣ ಮುಗಿಸಿದ್ದು, `ಕನ್ನೇಶ್ವರ’, `ಉಪ್ಪಿ ರುಪೀ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಅದಲ್ಲದೇ ತನ್ನ 50 ನೇ ಚಿತ್ರಕ್ಕೆ ತಾನೇ ಆಕ್ಷನ್ ಕಟ್ ಹೇಳುವುದಕ್ಕೆ ತಯಾರಿ ನಡೆಸುತ್ತಿದ್ದಾರೆ. ಅದರ ಮಧ್ಯೆಯೇ  ಉಪೇಂದ್ರ ಮಂಜು ಮಾಂಡವ್ಯ ಮತ್ತು ಶಶಾಂಕ್ ಸಿನಿಮಾಗೆ ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ.