ಈ ವಾರ ತೆರೆಗೆ ಉಪೇಂದ್ರ ಮತ್ತೆ ಬಾ

ರಿಯಲ್ ಸ್ಟಾರ್ ಉಪೇಂದ್ರನ `ಉಪೇಂದ್ರ ಮತ್ತೆ ಬಾ’ ಸಿನಿಮಾ `ಇಂತಿ ನಿನ್ನ ಪ್ರೇಮ’ ಟ್ಯಾಗ್ಲೈನ್ ಜೊತೆ ಇದೇ ಶುಕ್ರವಾರ ಎಲ್ಲೆಡೆ ಬಿಡುಗಡೆಯಾಗುತ್ತಿದೆ. ಸದ್ಯ ಉಪೇಂದ್ರ `ಪ್ರಜಾಕೀಯ’ದಲ್ಲಿಯೇ ಬ್ಯೂಸಿಯಾಗಿದ್ದು ಈ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಚಿತ್ರದ ಮಹತ್ವ ಮತ್ತಷ್ಟು ಹೆಚ್ಚಿದೆ. ಹಯಗ್ರೀವ ಎಂಟರ್‍ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಿಸಿರುವ `ಉಪೇಂದ್ರ ಮತ್ತೆ ಬಾ’ ಚಿತ್ರದ ಮೂಲಕ ಉಪ್ಪಿ-ಪ್ರೇಮಳನ್ನು ಮತ್ತೆ ತೆರೆಯ ಮೇಲೆ ಜೊತೆಯಾಗಿ ನೋಡಬಹುದಾಗಿದೆ.  ಚಿತ್ರಕ್ಕೆ ಉಪೇಂದ್ರನೇ ಸ್ವತಃ ಸಂಭಾಷಣೆ ನೀಡಿದ್ದು ಚಿತ್ರದ ಇನ್ನೊಂದು ವಿಶೇಷವಾಗಿದೆ. ಈ ಸಿನಿಮಾಗೆ ಅರುಣ್ ಲೋಕನಾಥ್ ಆಕ್ಷನ್ ಕಟ್ ಹೇಳಿದ್ದಾರೆ.

ಈ ಸಿನಿಮಾದಲ್ಲಿ ಉಪೇಂದ್ರನ ಇನ್ನೊಬ್ಬಳು ಹಿರೋಯಿನ್ ಆಗಿದ್ದ ಚಾಂದಿನಿಯೂ ಪ್ರಮುಖ ಪಾತ್ರದಲ್ಲಿದ್ದಾಳೆ. ಜೊತೆಗೆ ಶೃತಿ ಹರಿಹರನ್, ಹರ್ಷಿಕ ಪೆÇಣಚ್ಚ, ಸಾಯಿಕುಮಾರ್, ಸಾಧುಕೋಕಿಲ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ.