ಬಿಜೆಪಿಗೆ ಉ ಪ್ರ ಶಿಯಾ ಮುಸ್ಲಿಂ ನಾಯಕ ಬೆಂಬಲ

ಲಖನೌ : ಶಿಯಾ ಮಸ್ಲಿಮರ ಪ್ರಭಾವಿ ನಾಯಕ ಮೌಲಾನ ಸಯಿದ್ ಕಲ್ಬೆ ಜವದ್ ನಖ್ವಿ ಅವರ ಮಾತುಗಳಿಗೆ ಶಿಯಾ ಸಮುದಾಯ ಬಹಳಷ್ಟು ಮನ್ನಣೆ ನೀಡುತ್ತದೆ. ಉತ್ತರ ಪ್ರದೇಶ ಚುನಾವಣೆ ಸಂದರ್ಭ ಅವರು ತಮ್ಮ ಸಮುದಾಯಕ್ಕೆ  ಸಮಾಜವಾದಿ-ಕಾಂಗ್ರೆಸ್ ಪಕ್ಷದ ಮೈತ್ರಿಕೂಟವನ್ನು ಬೆಂಬಲಿಸದಂತೆ ಸಲಹೆ ನೀಡಿರುವುದು  ಗಮನಾರ್ಹ.  ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸುವಂತೆ ಅವರು ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಸಮುದಾಯದ ಮಂದಿಗೆ ಕರೆ ನೀಡಿದ್ದರು.

2012ರ ಚುನಾವಣೆ ಸಂದರ್ಭ ಶಿಯಾಗಳು ಸಮಾಜವಾದಿ ಪಕ್ಷವನ್ನು ಬೆಂಬಲಿಸಿದ್ದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು. ಆದರೆ ಈ ಬಾರಿ “ಜನರು ಬಿಎಸ್ಪಿ ಹಾಗೂ ಬಿಜೆಪಿ ನಡುವೆ ಯಾರನ್ನಾದರೂ ಆರಿಸಬೇಕು” ಎಂದು ಅವರು ಹೇಳಿಕೊಂಡಿದ್ದರು. ದೇಶದ ಒಟ್ಟು ಮುಸ್ಲಿಂ ಜನಸಂಖ್ಯೆಯಲ್ಲಿ ಶಿಯಾಗಳು ಶೇ 25ರಷ್ಟಿದ್ದಾರೆ.