ಯೋಗಿ ರಾಜ್ಯದಲ್ಲಿ ಶಾಲಾ ಪುಸ್ತಕಗಳಿಗೂ ಕೇಸರಿ ಕಲರ್

 ಲಕ್ನೋ : ಇಲ್ಲಿನ ಸೆಕ್ರೆಟೇರಿಯಟ್ ಕಟ್ಟಡದಲ್ಲಿರುವ ತಮ್ಮ ಕಚೇರಿಗೆ ಕೇಸರಿ ಬಣ್ಣ ಬಳಿದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ತಮ್ಮ ಗಮನವನ್ನು ಶಾಲಾ ಪಠ್ಯಪುಸ್ತಕಗಳತ್ತ ಹರಿಸಿದ್ದಾರೆ. ಎಂಟನೇ ತರಗತಿ ತನಕದ ಪಠ್ಯ ಪುಸ್ತಕಗಳ ಮುಖಪುಟವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಕೇಸರೀಕರಣಗೊಳಿಸಲು ಅವರು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.