ಶಾಲಾ ಪಠ್ಯದಿಂದ ಮೊಗಲ್ ಚರಿತ್ರೆ ಕೈಬಿಡಲು ಉ ಪ್ರ ಸರಕಾರ ನಿರ್ಧಾರ

ಲಕ್ನೋ : ಉತ್ತರ ಪ್ರದೇಶ ಶಾಲೆಗಳ ಪಠ್ಯಕ್ರಮ ಶೀಘ್ರ ಬದಲಾಗಲಿದ್ದು, ಇದರಲ್ಲಿ ಮೊಗಲ್ ದೊರೆಗಳ ಚರಿತ್ರೆಗೆ ಅವಕಾಶ ನಿರಾಕರಿಸಲು ಸರ್ಕಾರ ನಿರ್ಧರಿಸಿದೆ.

ಸೆಕಂಡರಿ ಶಿಕ್ಷಣ ಖಾತೆಯನ್ನೂ ಹೊಂದಿರುವ ಡೀಸಿಎಂ ದಿನೇಶ್ ಶರ್ಮ ಈ ಬಗ್ಗೆ ಹೇಳಿಕೆ ನೀಡುತ್ತ, “ಮೊಗಲ್ ದೊರೆಗಳು ನಮ್ಮ ಪೂರ್ವಜರಲ್ಲ, ಅವರು ಲೂಟಿಕೋರರು. ಶಾಲಾ ಮಕ್ಕಳು ಮೊಗಲ್ ದೊರೆಗಳ ಬಗ್ಗೆ ಅಸತ್ಯ ತಿಳಿದುಕೊಳ್ಳಬಾರದೆಂಬ ನೆಲೆಯಲ್ಲಿ ನಾವು ಪಠ್ಯಪುಸ್ತಕಗಳಿಂದ ಅವರ ಚರಿತ್ರೆ ಅಳಿಸಿ ಹಾಕಲಿದ್ದೇವೆ” ಎಂದರು.