ಯೋಗಿ ವಿಚಾರಣೆಗೆ ಉ ಪ್ರದೇಶ ಸರ್ಕಾರ ನಕಾರ

ಅಲಹಾಬಾದ್ : ರೋರಕಪುರದಲ್ಲಿ 2007ರಲ್ಲಿ ನಡೆದಿದ್ದ ಕೋಮು ಗಲಭೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸೀಎಂ ಯೋಗಿ ಆದಿತ್ಯನಾಥರ ವಿರುದ್ಧ ವಿಚಾರಣೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೈಕೋರ್ಟಿಗೆ ಅಫಿದವಿತ್ತೊಂದರ ಮೂಲಕ ತಿಳಿಸಲು ನಿರ್ಧರಿಸಿದೆ. ಅಂದು ಆದಿತ್ಯನಾಥರ ಭಾಷಣ ಬಳಿಕ ಕೋಮುಗಲಭೆ ಹಬ್ಬಿತ್ತು. ಆವಾಗ ಯೋಗಿ ಆದಿತ್ಯನಾಥರು ಸ್ಥಳೀಯ ಬಿಜೆಪಿ ಸಂಸದರಾಗಿದ್ದರು. ಹಿಂದೂ ಯುವಕನೊಬ್ಬನ ಹತ್ಯೆ ಬಳಿಕ ಇಲ್ಲಿ ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ಮಧ್ಯೆ ಗಲಭೆ ನಡೆದಿತ್ತು.