ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮ0ಗಳೂರು : ಪಾಲಿಕೆ ವ್ಯಾಪ್ತಿಯಲ್ಲಿನ ನೀರಿನ ಬಳಕೆದಾರರಿಗೆ ಈಗಾಗಲೇ ನೀರಿನ ಬಿಲ್ ವಿತರಣೆಯಾಗುತ್ತಿದೆ. ಆದರೆ ಬಳಕೆದಾರರು ಸರಿಯಾಗಿ ಬಿಲ್ ಪಾವತಿಸದೆ ಬಾಕಿ ಉಳಿಸಿದ್ದು, ಅಂತಹ ಬಳಕೆದಾರರು 15 ದಿನದೊಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.

ಸಾರ್ವಜನಿಕರು ಅನಧಿಕೃತವಾಗಿ/ಮೀಟರ್ ಅಳವಡಿಸದೇ ನೀರಿನ ಸಂಪರ್ಕ ಪಡೆದುಕೊಂಡಲ್ಲಿ ಅಂತಹ ಸಂಪರ್ಕಗಳ ಬಗ್ಗೆ ಪಾಲಿಕೆಗೆ 15 ದಿನದೊಳಗೆ ಮಾಹಿತಿ ನೀಡಿ ಸಕ್ರಮಗೊಳಿಸಲು ಕ್ರಮವಹಿಸಬೇಕು. ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು  ತಿಳಿಸಿದ್ದಾರೆ.