ಸನ್ಮಾನ ಸಿಗಬೇಕೇ ಪುತ್ತೂರಿಗೆ ಬನ್ನಿ

ಸನ್ಮಾನ ಪಡೆದುಕೊಳ್ಳ ಬೇಕಾದರೆ ಏನಾದರೂ ಸಾಧನೆ ಮಾಡಿರಬೇಕು, ಅಂಥವರನ್ನು ಸಮಾಜ ಗುರುತಿಸಿ ಅವರಿಗೆ ಸಾರ್ವಜನಿಕವಾಗಿ ಸನ್ಮಾನ ಮಾಡುವುದು ಹಿಂದಿನಿಂದಲೇ ನಡೆದುಕೊಂಡ ಬಂದ ಒಂದು ನಿಯಮ.
ಆದರೆ ಇತ್ತೀಚೆಗಿನ ದಿನಗಳಲ್ಲಿ ಸಿಕ್ಕ ಸಿಕ್ಕವರಿಗೆಲ್ಲಾ ಪುತ್ತೂರಿನಲ್ಲಿ ಸನ್ಮಾನ ನಡೆಯುತ್ತಿದ್ದು ಸನ್ಮಾನಕ್ಕೆ ಬೆಲೆಯೇ ಇಲ್ಲದಂತಾಗಿದೆ. ಯಾವುದೇ ಕಾರ್ಯಕ್ರಮಕ್ಕೆ ಹಣ ಕೊಟ್ಟರೆ ಸಾಕು, ಅವರು ಸಾಧನೆ ಮಾಡದೇ ಇದ್ದರೂ ಸಾರ್ವಜನಿಕರ ಮುಂದೆ ಅವರನ್ನು ದೊಡ್ಡ ಸಾಧಕರು ಅಥವಾ ಸಮಾಜ ಸೇವಕರು ಎಂದು ಬಿಂಬಿಸಿ ಅವರನ್ನು ಸಾರ್ವಜನಿಕವಾಗಿ ಸನ್ಮಾನ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಪುತ್ತೂರು ಹಾಗೂ ಆಸುಪಾಸಿನಲ್ಲಿ ಸುಮಾರು 500 ಕ್ಕೂ ಮಿಕ್ಕಿ ಮಂದಿಗೆ ಸನ್ಮಾನ ಮಾಡಲಾಗಿದೆ. ಆದರೆ ಇವರ ಪೈಕಿ ಸಾಧನೆ ಮಾಡಿದವರು ಮತ್ತು ನಿಜವಾದ ಸನ್ಮಾನಕ್ಕೆ ಅರ್ಹರಾಗಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಸಿಕ್ಕ ಸಿಕ್ಕವರಿಗೆಲ್ಲಾ ಪುತ್ತೂರಿನಲ್ಲಿ ಮಾತ್ರ ಸನ್ಮಾನ ಮಾಡುತ್ತಿದ್ದಾರೆ, ನಿಜವಾಗಿಯೂ ಸಾಧನೆ ಮಾಡಿದವರನ್ನು ಸಮಾಜ ಅಥವಾ ಸಂಘಟನೆ ಗುರುತಿಸುವುದಿಲ್ಲ. ಇದರಿಂದ ಸನ್ಮಾನದ ಗೌರವ ಕಡಿಮೆಯಾಗುತ್ತಿದೆ. ಸಂಘಟನೆಯವರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ

  • ಟಿ ಎಸ್ ಎಂ ಪೂಜಾರಿ  ಪುತ್ತೂರು