ಅವಿವಾಹಿತೆ ನಿಗೂಢ ನಾಪತ್ತೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಅವಿವಾಹಿತ ಯುವತಿಯೋರ್ವಳು ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಪುದು ಗ್ರಾಮದ ಜುಮಾದಿಗುಡ್ಡೆ ನಿವಾಸಿ ಯಾಸಿನ್-ಮಮ್ತಾಜ್ ದಂಪತಿಯ ಪುತ್ರಿ ಮೆಹರುನ್ನಿಸಾ (17) ಎಂಬಾಕೆಯೇ ಮಂಗಳವಾರದಿಂದ ನಾಪತ್ತೆಯಾಗಿರುವ ಯುವತಿ. ಕಳೆದ ಎರಡು ವರ್ಷಗಳ ಹಿಂದೆ 9ನೇ ತಗರತಿ ಬಳಿಕ ಶಿಕ್ಷಣ ಮೊಟಕುಗೊಳಿಸಿ ಮನೆಯಲ್ಲಿದ್ದ ಈಕೆ ಮಂಗಳವಾರ ಸಂಜೆ ಅಂಗಡಿಗೆಂದು ಹೋದವಳು ಮರಳಿ ಮನೆಗೆ ಬಂದಿಲ್ಲ ಎಂದು ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.