ಅಂಧ ವಿದ್ಯಾರ್ಥಿಗಳ ಅಪೂರ್ವ ಸಂಗಮ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಾಸರಗೋಡು ಸರಕಾರಿ ದೃಷ್ಟಿಹೀನ ಶಾಲಾ ವಿದ್ಯಾರ್ಥಿಗಳ ಅಪೂರ್ವ ಸಂಗಮ ನಡೆಯಿತು.

ವಿಶಿಷ್ಟವಾದ ಶೈಲಿಯಲ್ಲಿ ದೃಷ್ಟಿಹೀನ ಹಳೆ ವಿದ್ಯಾರ್ಥಿಗಳು ಒಟ್ಟುಗೂಡಿ ತಮ್ಮ ಸವಿನೆನಪುಗಳನ್ನು ಹಂಚಿಕೊಂಡ ದೃಶ್ಯ ಮನೋಹರವಾಗಿತ್ತು.

ಕಂಪ್ಯೂಟರ್ ಉಪಯೋಗಿಸಿ ಪುಸ್ತಕಗಳನ್ನು ಓದುವ ತರಬೇತಿಯನ್ನು ಪಡಕೊಳ್ಳುವ ಉದ್ದೇಶದಿವಿದ್ಯಾರ್ಥಿ ಸಂಗಮವನ್ನು ಆಯೋಜಿಸಿದ್ದರು.

ಓದಲಿರುವ ಪುಸ್ತಕವನ್ನು ಕಂಪ್ಯೂಟರಿನಲ್ಲಿ ಸ್ಕ್ಯಾನ್ ಮಾಡಿದ ಬಳಿಕ ಗೂಗಲ್ ಸಹಾಯದೊಂದಿಗೆ ಓದುವ ತರಬೇತಿಯನ್ನು ನೀಡಲಾಯಿತು. ದೃಷ್ಟಿಯನ್ನು ಕಳಕೊಂಡವರು ಸಾರ್ವಜನಿಕ ಸ್ಥಳದಲ್ಲಿ ಯಾವ ರೀತಿ ಇರಬೇಕೇಂಬುದರ ಬಗ್ಗೆ ಹರೀಶ್ ಕಾನಾಯಿ ತರಬೇತಿ ನೀಡಿದರು. 1960 ರಿಂದ 2016ರ ಬ್ಯಾಚಿನ ದೃಷ್ಟಿಯನ್ನು ಕಳಕೊಂಡ ವಿದ್ಯಾರ್ಥಿಗಳು ಈ ಸಂಗಮದಲ್ಲಿ ಪಾಲ್ಗೊಂಡರು.