ಶಿರಿಯಾ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಶಂಕಾಸ್ಪದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ಕುಂಬಳೆ ಸಮೀಪದ ಶಿರಿಯಾ ಹೊಳೆಯಲ್ಲಿ ಪತ್ತೆಯಾಗಿದೆ.

ಮೀನಿಗಾಗಿ ಗಾಳ ಹಾಕಲು ಬಂದಿದ್ದ ಕೆಲವರು ಹೊಳೆಯಲ್ಲಿ ಶವ ತೇಲುತ್ತಿರುವುದನ್ನು ಕಂಡು ಪೆÇಲೀಸರಿಗೆ ಮಾಹಿತಿ ನೀಡಿದ ಬಳಿಕ ಪೆÇಲೀಸರು ಆಗಮಿಸಿ ಪಂಚನಾಮೆ ನಡೆಸಿದ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಶವ ಇರಿಸಲಾಗಿದೆ.

ಮೃತ ವ್ಯಕ್ತಿಗೆ ಸುಮಾರು 35 ವರ್ಷ ಪ್ರಾಯ ಅಂದಾಜಿಸಲಾಗಿದೆ. ಪ್ಯಾಂಟ್ ಹಾಗೂ ಅಂಗಿ ಧರಿಸಿದ್ದಾನೆ. ಮೂಗಿನಲ್ಲಿ ರಕ್ತ ಒಸರಿದ ಕಲೆಗಳಿವೆ. ಕುತ್ತಿಗೆಯಲ್ಲಿ ಗಾಯ ಕಂಡು ಬಂದಿದೆ. ಸಾವಿನಲ್ಲಿ ನಿಗೂಢತೆ ಕಂಡುಬಂದ ಹಿನ್ನೆಲೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ ಬಳಿಕವಷ್ಟೇ ಸಾವಿನ ಕಾರಣ ತಿಳಿದುಬರಲಿದೆ. ಕುಂಬಳೆ ಪರಿಸರದಲ್ಲಿ ಯಾರಾದರೂ ನಾಪತ್ತೆಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.