ಬಲ್ನಾಡು ಗುಡ್ಡದಲ್ಲಿ ಅಪರಿಚಿತ ಶವ ಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಲ್ನಾಡು ಗ್ರಾಮದ ಬಾಯಾರು ಎಂಬಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ತಲೆಯ ಭಾಗದಲ್ಲಿ ರಕ್ತ ಚಿಮ್ಮುತ್ತಿದ್ದು ಇದೊಂದು ಕೊಲೆ ಎಂದು ಶಂಕಿಸಲಾಗಿದೆ. ಸುಮಾರು 50 ವರ್ಷ ಪ್ರಾಯದ ವ್ಯಕ್ತಿಯ ಶವ ಪೊದೆಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿ ಧರಿಸಿದ್ದ ಲುಂಗಿಯನ್ನು ಬಿಚ್ಚಲಾಗಿದೆ ಮತ್ತು ತಲೆಯ ಮೇಲೆ ರಕ್ತದ ಕಲೆಗಳಿವೆ. ತಲೆಗೆ ಕಲ್ಲು ಎತ್ತಿ ಹಾಕಿದ ರೀತಿಯಲ್ಲಿ ತಲೆಯ ಭಾಗದಲ್ಲಿ ಗಾಯಗಳಿದ್ದು, ಕೊಲೆ ಮಾಡಿ ಎಸೆದಿರುವ ಕುರಿತು ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ.