ಅಪರಿಚಿತನ ಶವ ಪತ್ತೆ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಮುರ್ಡೇಶ್ವರದ ರೈಲು ನಿಲ್ದಾಣದ ಸನಿಹದ ಕ್ರಶರ್ ಕಾಮಗಾರಿ ನಡೆಸುವ ಕಟ್ಟಡವೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಸೋಮವಾರ ಪತ್ತೆಯಾಗಿದೆ.

ಮೃತನು ನೀಲಿ ಬಣ್ಣದ ಜಿನ್ ಪ್ಯಾಂಟ್ ಹಾಗೂ ಟೀ-ಶರ್ಟ್ ಧರಿಸಿದ್ದಾನೆ. ಈತ ಯಾವುದೇ ವಿಷ ಸೇವಿಸಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹ ದೊರೆತ ಸ್ಥಳದಲ್ಲಿ ವಿಷದ ಬಾಟಲಿ ಹಾಗೂ ಮೊಬೈಲ್ ಸಿಕ್ಕಿದೆ. ಪೊಲೀಸರು ಶವÀವನ್ನು ಮುರ್ಡೇಶ್ವರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.