ಟಿಪ್ಪರಿನಲ್ಲಿ ಅಕ್ರಮ ಮಣ್ಣು ಸಾಗಾಟ

ಟರ್ಪಾಲ್ ಹಾಕದೆ ಅಕ್ರಮವಾಗಿ ಮಣ್ಣು ಹೊತ್ತು ಸಾಗುತ್ತಿರುವ ಟಿಪ್ಪರ್

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಿನ್ನಿಗೋಳಿ, ಶಿಮಂತೂರು, ಐಕಳ, ಬಳ್ಕುಂಜೆ ಪಂಚಾಯತಿ ವ್ಯಾಪ್ತಿಯಲ್ಲಿ ಟಿಪ್ಪರುಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದ್ದು ಗಣಿ ವಿಜ್ಞಾನ ಇಲಾಖಾಧಿಕಾರಿಗಳು ಮೌನವಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

ಅಕ್ರಮ ಮಣ್ಣು ಸಾಗಾಟದ ಟಿಪ್ಪರುಗಳು ನಾಗಾಲೋಟದಿಂದ ಓಡುತ್ತಿದ್ದು, ಹಿಂದಿನಿಂದ ಬರುತ್ತಿರುವ ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನಿಗರಿಗೆ ತೀವ್ರ ತೊಂದರೆಯಾಗುತ್ತಿದೆ. ಓಬಿರಾಯನ ಕಾಲದ ಟಿಪ್ಪರುಗಳನ್ನು ನೋಡಿದರೆ ಪ್ರಯಾಣಿಕರು ಭಯಭೀತರಾಗುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಟಿಪ್ಪರುಗಳ ಅಕ್ರಮ ಮಣ್ಣು ಸಾಗಾಟದ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರು ಆಗ್ರಹ.