ತೆರಿಗೆ ವಂಚನೆ : ಕೋಳಿ ವಶ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ತೆರಿಗೆ ವಂಚಿಸಿ ಸಾಗಿಸುತ್ತಿದ್ದ ಕೋಳಿಗಳನ್ನು ಬದಿಯಡ್ಕ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ನೀರ್ಚಾಲು ಸನಿಹದ ಮಾನ್ಯದಿಂದ ಕೋಳಿ ವಶಪಡಿಸಲಾಗಿದೆ. ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ 35 ಪೆಟ್ಟಿಗೆ ಕೋಳಿಗಳನ್ನು ವಶಪಡಿಸಿ ಚಾಲಕ ಚೆರ್ಕಳ ನಿವಾಸಿ ಅಬ್ದುಲ್ ನವಾಸ್ ವಿರುದ್ಧ ದೂರು ದಾಖಲಿಸಿ ಬಳಿಕ 76128 ರೂ ದಂಡ ವಸೂಲು ಮಾಡಲಾಯಿತು.