ನಾಲ್ಕು ಮರಳು ದೋಣಿ ನಾಶಗೈದ ಪೊಲೀಸರು

ಸಾಂದರ್ಭಿಕ ಚಿತ್ರ

ಕಾಸರಗೋಡು : ನಿಷೇಧ ಹೇರಿದ ಕಡವಿನಿಂದ ವ್ಯಾಪಕವಾಗಿ ಮರಳು ಸಾಗಾಟ ನಡೆಸುತ್ತಿರುವುದಾಗಿ ರಹಸ್ಯವಾಗಿ ಲಭಿಸಿದ ಮಾಹಿತಿಯಂತೆ ಘಟನಾ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಅಲ್ಲಿಲ್ಲಿ ನಾಲ್ಕು ದೋಣಿಗಳನ್ನು ವಶಕ್ಕೆ ತೆಗೆದು ಸಂಪೂರ್ಣವಾಗಿ ನಾಶಗೈದ ಘಟನೆ ನಡೆದಿದೆ.

ತುರ್ತಿ ಹೊಳೆಯಲ್ಲಿ ಮರಳುಗಾರಿಕೆಯನ್ನು ನಿಷೇಧಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಂದ ಪೊಲೀಸರಿಗೆ ಗೊತ್ತಿಲ್ಲದೆ ಮರಳು ಮಾಫಿಯಾಗಳು ವ್ಯಾಪಕವಾಗಿ ಅನಧಿಕೃತ ಮರಳು ಸಾಗಾಟ ನಡೆಸುತಿದ್ದರು. ಇದರಂತೆ ರಹಸ್ಯ ಮಾಹಿತಿಯ ಆಧಾರದಲ್ಲಿ ಕಾಸರಗೋಡು ನಗರ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದೆ.