ಉಮೇಶ್ ಶೆಟ್ಟಿ ಕೊಲೆ ಪ್ರಕರಣ

ಕೊಲೆ ಆರೋಪಿಗಳು

ಕಿನ್ನಿಗೋಳಿಗೆ ಆರೋಪಿಗಳನ್ನು
ಕರೆತಂದು ಸ್ಥಳ ಪರಿಶೀಲನೆ

ನಮ್ಮ ಪ್ರತಿನಿಧಿ ವರದಿ
ಮುಲ್ಕಿ : ಕೆಲ ದಿನಗಳ ಹಿಂದೆ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡ ಪ್ರದೇಶದಲ್ಲಿ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್ ಶೆಟ್ಟಿ (29) ಕೊಲೆ ಆರೋಪದ ಮೇಲೆ ಬಂಧಿತರಾದ ನಾಲ್ವರನ್ನು ಆರೋಪಿಗಳನ್ನು ಪೊಲೀಸರು ಕಿನ್ನಿಗೋಳಿ ಪರಿಸರಕ್ಕೆ ಕರೆತಂದು ಶುಕ್ರವಾರ ಸಂಜೆ ಸ್ಥಳ ಪರಿಶೀಲನೆ ನಡೆಸಿದರು.
ಮುಲ್ಕಿ ಹಾಗೂ ಮೂಡಬಿದ್ರೆ ಪೊಲೀಸರು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಗಳಾದ ನಿಡ್ಡೋಡಿ ನಿವಾಸಿಗಳಾದ ರಾಜೇಶ್ ಶೆಟ್ಟಿ (32), ತಿಲಕ್ ಪೂಜಾರಿ (26) ಹಾಗೂ ಕಿನ್ನಿಗೋಳಿ ನಡುಗೋಡು ಗ್ರಾಮದ ಕೊಡೆತ್ತೂರು ಬಳಿಯ ಪ್ರಸಾದ ಆಚಾರ್ಯ (27) ಹಾಗೂ ಅವನ ಚಿಕ್ಕಮ್ಮನ ಮಗ ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ನಿವಾಸಿ ಪ್ರಕಾಶ್ ಆಚಾರ್ಯ(28)ರನ್ನು ಕಿನ್ನಿಗೋಳಿಯ ಕೊಡೆತ್ತೂರಿಗೆ ಕರೆತಂದು ತನಿಖೆ ನಡೆಸಿದರು.

ಮಹಾನ್ ವ್ಯಕ್ತಿಯಾಗಲು
ಹೊರಟವ ಜೈಲುಪಾಲು
ಆರೋಪಿ ಪ್ರಸಾದ ಆಚಾರ್ಯ ಶೋಕಿ ಜೀವನ ನಡೆಸುತ್ತಿದ್ದು, ಇತ್ತೀಚೆಗೆ ಮನೆ ಕಟ್ಟು ಆಲೋಚನೆಯಲ್ಲಿ ಗುತ್ತಿಗೆದಾರನೊಬ್ಬನಿಗೆ ಸುಮಾರು 20 ಲಕ್ಷ ಕೊಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸಾದ ಆಚಾರ್ಯ ಸಾಕಷ್ಟು ಚಿನ್ನಾಭರಣ ಧರಿಸಿ ಕಿನ್ನಿಗೋಳಿ ಪರಿಸರದಲ್ಲಿ ತಾನು ಮಹಾನ್ ವ್ಯಕ್ತಿಯಾಗುತ್ತೇನೆ ಎಂದು ಮಿತ್ರರಲ್ಲಿ ಹೇಳಿಕೊಂಡು ತಿರುಗುತ್ತಿದ್ದ ಎಂದು ಜನ ಹೇಳುತ್ತಿದ್ದಾರೆ. ಆರೋಪಿಗಳ ವಿರುದ್ಧ ಇನ್ನಷ್ಟು ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸುತ್ತಿದ್ದಾರೆ.