ಉಮಾ, ಆಡ್ವಾಣಿ ರಾಜೀನಾಮೆ ಅನಗತ್ಯ ಎಂದ ಪೇಜಾವರ ಶ್ರೀ

ನಮ್ಮ ಪ್ರತಿನಿಧಿ ವರದಿ

ಉಡುಪಿ : “ಅಡ್ವಾಣಿ, ಉಮಾಭಾರತಿ ಭ್ರಷ್ಟಾಚಾರ ನಡೆಸಿದ ಆರೋಪಿಗಳಲ್ಲ, ಹೀಗಾಗಿ ಅವರು ರಾಜಿನಾಮೆ ನೀಡುವ ಅಗತ್ಯವಿಲ್ಲ. ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಭ್ರಷ್ಟಾಚಾರ, ಕೊಲೆ ಪ್ರಕರಣಗಳಿಗೆ ಹೋಲಿಕೆ ಮಾಡಲಾಗದು” ಎಂದು ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಬಾಬರಿ ಧ್ವಂಸ ಪ್ರಕರಣದಲ್ಲಿ ಆಡ್ವಾಣಿ ಮತ್ತು ಉಮಾಭಾರತಿ ಪಾತ್ರದ ಬಗ್ಗೆ ಮರು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಕುರಿತ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

“ಲಾಲೂ, ಜಯಲಲಿತಾ ಅವರ ವಿರುದ್ಧ ಆರೋಪ ಇದ್ದಾಗಲೂ ಅಧಿಕಾರ ಹೊಂದಿದ್ದರು. ಮಸೀದಿ ಧ್ವಂಸ ವಿಚಾರ ಅತ್ಯಂತ ದುಃಖದ ವಿಚಾರ ಅಂತ ಸ್ವತಃ ಅಡ್ವಾಣಿ ಹೇಳಿದ್ದಾರೆ. ಅಡ್ವಾಣಿಯವರನ್ನು ರಾಷ್ಟ್ರಪತಿ ಹುದ್ದೆಗೆ ಆರಿಸಿದರೂ ತಪ್ಪೇನಿಲ್ಲ. ಇದು ನನ್ನ ಸ್ಪಷ್ಟ ಅಭಿಪ್ರಾಯ” ಎಂದು ಪೇಜಾವರ ಶ್ರೀ ಹೇಳಿದ್ದಾರೆ.