ಉಳ್ಳಾಲದ ಬ್ಯೂಟಿಷಿಯನ್ ಆತ್ಮಹತ್ಯೆ

ಮೃತ ಮಧುಶ್ರೀ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬ್ಯೂಟೀಷಿಯನ್ ಕೆಲಸ ಮಾಡಿಕೊಂಡಿದ್ದ ಯುವತಿಯೊಬ್ಬಳು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುತ್ತಾರು ಸಂತೋಷ ನಗರದಲ್ಲಿ ನಡೆದಿದೆ.

ಮೃತರನ್ನು ಆನಂದ ಪೂಜಾರಿ ಎಂಬವರ ಪುತ್ರಿ ಮಧುಶ್ರೀ (21) ಎಂದು ಗುರುತಿಸಲಾಗಿದೆ. ಶನಿವಾರದಂದು ತಂದೆ ಕೆಲಸಕ್ಕೆ ಹಾಗೂ ತಾಯಿ ಅಂಗಡಿ ಸಾಮಾನು ತರಲೆಂದು ಹೋಗಿದ್ದ ವೇಳೆ, ಮನೆಯೊಳಗೆ ಚೂಡಿದಾರದ ಶಾಲನ್ನು ಪಕ್ಕಾಸಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಂಗಳೂರಿನಲ್ಲಿರುವ ಬ್ಯೂಟಿಪಾರ್ಲರಿನಲ್ಲಿ ಈಕೆ ಕೆಲಸ ಮಾಡಿಕೊಂಡಿದ್ದು, ಕಳೆದೊಂದು ತಿಂಗಳಿನಿಂದ ಕೆಲಸಕ್ಕೆ ಹೋಗದೇ ಮನೆಯಲ್ಲೇ ಉಳಿದುಕೊಂಡಿದ್ದಳು. ಸಾವಿಗೀಡಾಗುವ ಮುನ್ನ ತನ್ನ ಕೈಯಲ್ಲಿ ಸೂರಜ್ ಎಂಬಾತನ ಹೆಸರನ್ನು ಬರೆದಿಟ್ಟುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಈಕೆ ಮಾಡಿರುವ ಫೋನ್ ಕರೆಗಳ ಜಾಡು ಹಿಡಿದು ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ನಡುವೆ ಸೂರಜ್ ಎಂದು ಈಕೆ ಕೈಯಲ್ಲಿ ಬರೆದಿಟ್ಟಿರುವಾತನ ಸುಳಿವು ಪೊಲೀಸರಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಈ ನಡುವೆ ಮಧುಶ್ರೀ ಪೋಷಕರು ಆಕೆ ಮಾನಿಸಿಕವಾಗಿ ಇತ್ತೀಚಿನ ದಿನಗಳಲ್ಲಿ ನೊಂದಿದ್ದು, ಇದರಿಂದಲೇ ಸಾವಿಗೆ ಶರಣಾಗಿರಬೇಕೆಂದು ಶಂಕಿಸಿದ್ದಾರೆ.