ಉಜಾಲ ಯೋಜನೆ ಬಲ್ಬ್ ಬೆಲೆ ರೂ 65ಕ್ಕೆ ಇಳಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೇಂದ್ರ ಸರ್ಕಾರದ ಉನ್ನತ್ ಜ್ಯೋತಿ ಯೋಜನೆಯಡಿ (ಉಜಾಲ) ವಿತರಿಸುವ ಎಲ್ ಇ ಡಿ ಬಲ್ಬ್ ಈಗ 65 ರೂಪಾಯಿಗೆ ಲಭ್ಯವಿದೆ. 9 ವ್ಯಾಟ್ ಎಲ್ ಇ ಡಿ ಬಲ್ಬುಗಳನ್ನು ಈಗ ಹೊಸ ದರದಡಿ ಗ್ರಾಹಕರು ಖರೀದಿಸಬಹುದಾಗಿದೆ.

ಜನಸಾಮಾನ್ಯರ ಅನುಕೂಲಕ್ಕಾಗಿ ಇನ್ನಷ್ಟು ಹೊಸ ಬಲ್ಬುಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ಹೆಚ್ಚುವರಿ ವಿತರಣಾ ಕೌಂಟರುಗಳನ್ನು ಕೂಡಾ ತೆರೆಯಲಾಗುವುದು. ಉಜಾಲ ಯೋಜನೆಯಡಿ ವಿತರಿಸುವ ಎಲ್ ಇ ಡಿ ಬಲ್ಬುಗಳು ಉತ್ಕøಷ್ಟ ಗುಣಮಟ್ಟದಾಗಿದ್ದು 3 ವರ್ಷ ಉಚಿತ ರಿಪ್ಲೇಸ್ಮೆಂಟ್ ವಾರೆಂಟಿ ಹೊಂದಿದೆ. ಎನರ್ಜಿ ಎಫಿಷಿಯನ್ಸಿ ಸರ್ವೀಸ್ ಲಿಮಿಟೆಡ್ (ಇ ಇ ಎಸ್ ಎಲ್), ಕೇಂದ್ರ ಇಂಧನ ಸಚಿವಾಲಯದ ವತಿಯಿಂದ ದೇಶದಾದ್ಯಂತ ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಹೊಸ ದರಕ್ಕಿಂತ ಅಧಿಕ ಬೆಲೆಗೆ ಆಗ್ರಹಿಸಿದ ಮೂಲಕ ಉಜಾಲ ಗಮನಕ್ಕೆ ತರಬಹುದು ಎಂದು ಕಂಪನಿ ತಿಳಿಸಿದೆ.

ರಾಜ್ಯದ 30 ಜಿಲ್ಲೆಗಳಲ್ಲಿ ಈಗಾಗಲೇ 1.5 ಕೋಟಿ ಎಲ್ ಇ ಡಿ ಬಲ್ಬುಗಳನ್ನು ವಿತರಿಸಿದೆ. ಇದರಿಂದ ಗ್ರಾಹಕರ 729 ಕೋಟಿ ರೂ ವಾರ್ಷಿಕ ವಿದ್ಯುತ್ ಬಿಲ್ ಉಳಿತಾಯವಾಗಿದೆ.