ಹೊಸಬೆಟ್ಟು ಫಿಶರೀಸ್ ರಸ್ತೆ ಕಾಂಕ್ರೀಟ್ ವೇಳೆ ಒಳಚರಂಡಿ ಮಾಡಲು ಏನಡ್ಡಿ

ಹೊಸಬೆಟ್ಟುವಿನ ಶೆಟ್ಟಿ ಅಂಗಡಿಯಿಂದ ಸಮುದ್ರದತ್ತ ಸಾಗುವ ಫಿಶರೀಸ್ ರಸ್ತೆಯನ್ನು ಕಳೆದ ವರ್ಷ ಎತ್ತರಗೊಳಿಸಿ ಕಾಂಕ್ರೀಟೀಕರಣಗೊಳಿಸಲಾಯಿತು. ಆದರೆ ಒಳಚರಂಡಿಗೆ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಇದೀಗ ಮಳೆಗಾಲ ಪ್ರಾರಂಭವಾದುದರಿಂದ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ. ಸುತ್ತಮುತ್ತಲಿನ ಹಲವಾರು ಮನೆಗಳ ಅಂಗಳಕ್ಕೂ ನೀರು ನುಗ್ಗುತ್ತಿರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದೆ. ರಸ್ತೆಗೆ ಕಾಂಕ್ರೀಟ್ ಹಾಕುವಾಗಲೇ ಒಳಚರಂಡಿ ನಿರ್ಮಿಸುತ್ತಿದ್ದರೆ ಅತಿ ಕಡಿಮೆ ವೆಚ್ಚದಲ್ಲಿ ಕೆಲಸ ಪೂರ್ಣಗೊಳ್ಳುತ್ತಿತ್ತು. ಈಗಲಾದರೂ ಚರಂಡಿ ನಿರ್ಮಿಸದಿದ್ದರೆ ಮುಂದಿನ ದಿನಗಳಷ್ಟು ಬಹಳಷ್ಟು ಸಮಸ್ಯೆ ಉಂಟಾಗಲಿದೆ. ರಸ್ತೆಯ ಉದ್ದ ಕಡಿಮೆ ಇರುವುದರಿಂದ ಈಗಲೂ ಒಳಚರಂಡಿ ನಿರ್ಮಿಸುವುದಾದರೆ ಹೆಚ್ಚು ಖರ್ಚು ತಗಲಲಾರದು. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಒಳಚರಂಡಿಯನ್ನು ನಿರ್ಮಿಸಿ ನಮಗಾಗುವ ತೊಂದರೆ ನಿವಾರಿಸಲಿ

  • ಹರೀಶ್ ಹೊಸಬೆಟ್ಟು  ಫಿಶರೀಸ್ ರಸ್ತೆ ಮಂಗಳೂರು