ಸರ್ಟಿಫಿಕೇಟ್ ಹಿಡಿದಿಟ್ಟುಕೊಳ್ಳದಂತೆ ವಾರ್ಸಿಟಿಗಳಿಗೆ ಯುಜಿಸಿ ಆದೇಶ

ನವದೆಹಲಿ : ವಿದ್ಯಾರ್ಥಿಗಳ ಒರಿಜಿನಲ್ ಅಂಕ ಪಟ್ಟಿ, ಶಾಲಾ ಲಿವಿಂಗ್ ಸರ್ಟಿಫಿಕೇಟು ಮತ್ತು ಇತರ ದಾಖಲೆಗಳನ್ನು ಹಿಡಿದಿಟ್ಟುಕೊಳ್ಳುವಂತಿಲ್ಲ ಎಂದು ವಾರ್ಸಿಟಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯೂನಿವರ್ಸಿಟಿ ಅನುದಾನ ಆಯೋಗ (ಯುಜಿಸಿ) ನಿರ್ದೇಶನ ನೀಡಿದೆ.

ಕಾಲೇಜುಗಳು ಅಧ್ಯಯನದ ಪೂರ್ತಿ ಅವಧಿಗೆ ಮುಂಗಡ ಶುಲ್ಕ ವಸೂಲು ಮಾಡುವಂತಿಲ್ಲ ಎಂದು ಯ ಜಿ ಸಿ ಹೇಳಿದೆ.“ವಿದ್ಯಾರ್ಥಿಗಳ ಪ್ರವೇಶದ ವೇಳೆ ಅವರ ಪ್ರಮಾಣ ಪತ್ರಗಳು ಹಾಗೂ ಇತರ ದಾಖಲೆಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ, ಎಲ್ಲವೂ ಸರಿಯಾಗಿದ್ದಲ್ಲಿ ಅವುಗಳನ್ನು ವಿದ್ಯಾರ್ಥಿಗಳಿಗೆ ತಕ್ಷಣ ಹಿಂದಿರುಗಿಸಬೇಕು. ಸಂಸ್ಥೆಗಳು ತಮ್ಮ ದಾಖಲೆಗಾಗಿ ವಿದ್ಯಾರ್ಥಿಗಳ ಮೂಲ ಅಂಕಪತ್ರಿ ಅಥವಾ ದಾಖಲೆಗಳ ಬದಲಿಗೆ ಅಟೆಸ್ಡೆಡ್ ಪ್ರತಿ ಇಟ್ಟುಕೊಳ್ಳಬೇಕು” ಎಂದು ಯುಜಿಸಿಯ ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.