ಪಂಪ್ ಸೆಟ್ ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಬ್ರಹ್ಮಾವರ ಸಮೀಪದ ಆರೂರು ಗ್ರಾಮದ ಮೇಲ್ ಅಡಪು ನಿವಾಸಿ ಎಸ್ ನಾಗರಾಜ ಕೆದ್ಲಾಯ ಎಂಬವರು ಮನೆ ಸಮೀಪವಿರುವ ತೋಟದ ಬಾವಿಗೆ ಅಳವಡಿಸಿರುವ ಸುಮಾರು 8 ಸಾವಿರ ರೂಪಾಯಿ ಮೌಲ್ಯದ ಪಂಪ್ ಸೆಟ್ಟನ್ನು ಕಳ್ಳರು ಕಳವುಗೈದಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.