ಉಡುಪಿ ಜಿಲ್ಲೆಯಲ್ಲಿ 6 ತಾಲ್ಲೂಕು ಇರಬೇಕೆಂದ ಶಾಸಕ ಸೊರಕೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಒಟ್ಟೂ 6 ತಾಲ್ಲೂಕು ಕೇಂದ್ರಗಳಿರಬೇಕೆಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಗ್ರಹಿಸಿದ್ದಾರೆ. ಬ್ರಹ್ಮಾವರ, ಬೈಂದೂರು, ಕಾಪು ಸೇರಿದಂತೆ ಒಟ್ಟು 6 ತಾಲ್ಲೂಕು ರಚನೆಗೆ ಅವರು ಒತ್ತಾಯಿಸಿದ್ದಾರೆ.

ತೆಂಕ ಎರ್ಮಾಳು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದ ಸಂದರ್ಭದಲ್ಲಿ ಶಾಸಕರೂ ಆಗಿರುವ ಸೊರಕೆ ತಾಲ್ಲೂಕು ಕೇಂದ್ರದ ಆಗ್ರಹ ಮಂಡಿಸಿದ್ದಾರೆ.ಉತ್ತರ ಕನ್ನಡದಲ್ಲಿ ಇರುವ ಆರು ವಿಧಾನ ಸಭಾ ಕ್ಷೇತ್ರದಲ್ಲಿ 11 ತಾಲ್ಲೂಕುಗಳನ್ನು ಮಾಡಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಕೇವಲ ಮೂರು ತಾಲ್ಲೂಕುಗಳು ಮಾತ್ರ ಇವೆ. ಹೊಸ ತಾಲ್ಲೂಕು ವಿಸ್ತರಣೆ ಬಗ್ಗೆ ಕಾಪುವಿನ ಹೆಸರನ್ನು ಯಾರೂ ಕೂಡಾ ಇದುವರೆಗೆ ಉಲ್ಲೇಖವೇ ಮಾಡಿಲ್ಲ. ಆದರೆ ಎಂ ಪಿ ಪ್ರಕಾಶ್ ಸಮಿತಿಯಲ್ಲಿ ಕಾಪುವಿಗೆ ವಿಶೇಷ ತಹಶೀಲ್ದಾರ್ ನೇಮಕ ಮಾಡಬೇಕು ಎನ್ನುವ ಶಿಫಾರಸ್ಸನ್ನು ಮಾಡಲಾಗಿದೆ. ತಾಲ್ಲೂಕು ರಚನೆ ಬೇಡಿಕೆಗೆ 10 ಗ್ರಾಮ ಪಂಚಾಯತಗಳೂ ನಿರ್ಣಯ ಮಾಡಿವೆ ಎಂದು ಸೊರಕೆ ಹೇಳಿದ್ದಾರೆ.