ಗಬ್ಬೆದ್ದು ನಾರುತ್ತಿರುವ ಉಡುಪಿ ಹೋಟೆಲುಗಳು

ದೇಶದಾದ್ಯಂತ ಹೆಸರು ಮಾಡಿರುವ ಉಡುಪಿ ಹೋಟೆಲುಗಳು ಉಡುಪಿ ನಗರದಲ್ಲಿ ಮಾತ್ರ ಅತ್ಯಂತ ಕೊಳಕು ಮಟ್ಟದ್ದಾಗಿದೆ  ಕಳಪೆ ಸೋಡಿಯಂ ಹಾಕಿದ ಕೆಲ ಹೋಟೆಲುಗಳ ಆಹಾರವನ್ನು ತಿಂದರೆ ಆಸ್ಪತ್ರೆ ಸೇರುವುದು ಗ್ಯಾರಂಟಿ  ಯಾವುದೇ ಶುಚಿತ್ವ ಮತ್ತು ಸುರಕ್ಷತಾ ಕ್ರಮಗಳಿಲ್ಲ  ನಗರಸಭೆ ಮತ್ತು ಅಗ್ನಿಶಾಮಕ ದಳವಂತೂ ಮಾಮೂಲಿ ಪಡಕೊಂಡು ಬಾಲ ಮಡಚಿ ಕೂತಿವೆ  ಕೆಳಮಟ್ಟದ ಕಳಪೆ ಆಹಾರ ಪೂರೈಸಿ ಕೇವಲ ದರೋಡೆ ಮಾಡುವುದೇ ಇವರ ಉದ್ದೇಶ  ಬಿಲ್ ಅಂತೂ ಕೊಡುವುದೇ ಇಲ್ಲ  ಇವರು ಕೇಳಿದ ದುಡ್ಡು ಕೊಡದಿದ್ದರೆ ಬೈಗುಳ ಯಾವ ಇಲಾಖೆಯೂ ಇಂತಹ ಹೋಟೆಲುಗಳ ಮೇಲೆ ದಾಳಿ ಮಾಡದೆ ಆರಾಮವಾಗಿ ಸಂಬಳ ಗಿಂಬಳ ನುಂಗುತ್ತದೆ  ಅಧಿಕಾರಿಗಳು ಇನ್ನಾದರೂ ಕ್ರಮ ಜರುಗಿಸದಿದ್ದಲ್ಲಿ ಅನಾಹುತ ಖಂಡಿತಾ
ಗಿರೀಶ್ ನಾವುಡ ಓರ್ವ
ಪ್ರವಾಸಿಗ
ಉಪ್ಪಿನಂಗಡಿ