ದೇವಸ್ಥಾನ ನಗರಿ ಉಡುಪಿಯಲ್ಲಿ ಪರ್ಯಾಯ ಉತ್ಸವಕ್ಕೆ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ದೇವಸ್ಥಾನ ನಗರಿ ಉಡುಪಿ ಇದೀಗ ಮಹತ್ವದ ಪರ್ಯಾಯ ಮಹೋತ್ಸವಕ್ಕೆ ಭರದ ಸಿದ್ದತೆಗಳನ್ನು ನಡೆಸುತ್ತಿದೆ. ಮಧ್ವಾಚಾರ್ಯರು ಆರಂಭಿಸಿದ ಪರ್ಯಾಯ ಮಹೋತ್ಸವ ಈ ಬಾರಿ 2018ರ ಜನವರಿಯಲ್ಲಿ ನಡೆಯಲಿದೆ. ಪರ್ಯಾಯ ಉತ್ಸವ ಎಂದರೆ ಉಡುಪಿಯ ಎಂಟು ಮಠಗಳಿಗೆ ಪೂಜಾ ವಿಧಿಯನ್ನು ಆವರ್ತದಂತೆ ವರ್ಗಾಯಿಸುವುದು. ಈ ಬಾರಿ ಶ್ರೀಕೃಷ್ಣ ಮಠದಿಂದ ಶ್ರೀ ಪಲಿಮಾರ್ ಮಠಕ್ಕೆ ಪೂಜಾ ವಿಧಿಗಳು ವರ್ಗಾವಣೆಯಾಗಲಿದೆ. ಮುಂಬರುವ ಪರ್ಯಾಯ ಮಹೋತ್ಸವ 32ನೇ ಆವರ್ತದ್ದಾಗಿದ್ದು, ಹೆಚ್ಚು ವಿಶೇಷ ಮತ್ತು ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.

2018ರ ಜನವರಿ 18ಕ್ಕೆ ಪಲಿಮಾರ್ ಮಠದ ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮಿ ಸರ್ವಜ್ಞ ಪೀಠವನ್ನು ಆರೋಹಣ ಮಾಡಲಿದ್ದಾರೆ. ಅವರು ಇದು ಎರಡನೇ ಬಾರಿಗೆ ಕೈಗೊಳ್ಳುತ್ತಿದ್ದಾರೆ. ಈ ಮಹೋತ್ಸವದ ದೃಶ್ಯಗಳನ್ನು  ವೀಕ್ಷಿಸಲು ಜಗತ್ತಿನ ವಿವಿಧ ಭಾಗಗಳಿಂದ ಜನರು ಹರಿದು ಬರುತ್ತಾರೆ.

ಈ ಬಗ್ಗೆ ವಿವರಿಸಿದ ಪಲಿಮಾರ್ ಮಠದ ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಬಾಲಾಜಿ ರಾಘವೇಂದ್ರ, ಈ ಬಾರಿಯ ಹದಿನೈದು ದಿನಗಳ ಪರ್ಯಾಯ ಮಹೋತ್ಸವವನ್ನು ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ಪರ್ಯಾಯ ಉತ್ಸವು ವಿದ್ಯಾಧೀಶ ತೀರ್ಥ ಸ್ವಾಮಿ ಪುರಪ್ರವೇಶದೊಂದಿಗೆ 2018ರ ಜನವರಿ 3ರಿಂದ ಆರಂಭವಾಗಲಿದೆ. ಜನವರಿ 4ರಿಂದ 16ರವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಪರ್ಯಾಯ ಮಹೋತ್ಸವ ಕಾರ್ಯಕ್ರಮ ಜನವರಿ 18ರಂದು ನಸುಕಿನಿಂದಲೇ ಆರಂಭವಾಗಲಿದೆ. ಅಷ್ಟಮಠದ ಮಠಾಧೀಶರನ್ನು ವರ್ಣರಂಜಿತವಾಗಿ ಅಲಂಕರಿಸಿರುವ ಪಲ್ಲಕ್ಕಿಗಳಲ್ಲಿ ಜೋಡುಕಟ್ಟೆಯಿಂದ ರಥಬೀದಿವರೆಗೆ ಮೆರವಣಿಗೆಯಲ್ಲಿ ಹೊತ್ತೊಯ್ಯಲಾಗುತ್ತದೆ. ಮೆರವಣಿಗೆಯ ನಂತರ ವಿದ್ಯಾಧೀಶ ತೀರ್ಥರು ವಿಧ್ಯುಕ್ತವಾಗಿ ಸರ್ವಜ್ಞ ಪೀಠವನ್ನು ಏರಲಿದ್ದಾರೆ. ಪರ್ಯಾಯ ಉತ್ಸವದಲ್ಲಿ ಹಲವಾರು ಸಾಂಸ್ಕøತಿಕ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಾಲಾಜಿ ರಾಘವೇಂದ್ರ ಆಚಾರ್ಯ ಹೇಳಿದ್ದಾರೆ.

LEAVE A REPLY