ಕಂಡ್ಲೂರಿನಲ್ಲಿ ಡಿಸಿ, ಎಸಿ ಮೇಲೆ ಹಲ್ಲೆ : ಮತ್ತೆ ಐವರು ಆರೋಪಿಗಳ ಬಂಧನ

ಉಡುಪಿ : ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತು ಕುಂದಾಪುರದ ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ಅವರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಗೋರಖ್‍ನಾಥ್ (40), ಭೂತನಾಥ್ (55), ಅನಿಲ್ (24), ಸರವಣ್ (25) ಎಂಬವರನ್ನು ಬಂಧಿಸಲಾಗಿದ್ದು, ಇವರೆಲ್ಲರೂ ಉತ್ತರ ಪ್ರದೇಶದವರು. ಇನ್ನು ಇನ್ನೊಬ್ಬ ಆರೋಪಿ ಧಾರವಾಡದ ಮೂಲದ ರವಿ (27) ಎಂದು ಗುರುತಿಸಲಾಗಿದೆ.

ಈ ಮೂಲಕ ಕುಂದಾಪುರದಲ್ಲಿ ಡಿಸಿ, ಎಸಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಒಟ್ಟು ಬಂಧಿತರ ಸಂಖ್ಯೆ 13ಕ್ಕೇರಿದಂತಾಗಿದೆ. ಕಂಡ್ಲೂರಿನಿಂದಲೇ ಒಟ್ಟು 13 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.