ಉಡುಪಿ ಆಟೋ ಚಾಲಕ-ಮಾಲಕರಿಂದ ಜಿಲ್ಲಾ ಮಂತ್ರ್ರಿಗೆ ಬೇಡಿಕೆ ಪಟ್ಟಿ ಸಲ್ಲಿಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲೆಯ ಆಟೋ ರಿಕ್ಷಾ ಚಾಲಕ-ಮಾಲಕರ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಆಶ್ರಯದಾತ ಆಟೋ ಯೂನಿಯನ್ ಸಂಘಟನೆಯು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‍ರಿಗೆ ಮನವಿ ನೀಡಿ ಆಗ್ರಹಿಸಿದೆ.

“ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ಆಟೋ ವೃತ್ತಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ರಿಕ್ಷಾ ಚಾಲಕರು ಆನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇದರಿಂದ ರಿಕ್ಷಾ ಚಾಲಕರ ಕುಟುಂಬವು ತೊಂದರೆ ಅನುಭವಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಉಡುಪಿ ತಾಲೂಕಿನ ಗ್ರಾಮಾಂತರ ಪ್ರದೇಶದ ಡೀಸೆಲ್ ರಿಕ್ಷಾಕ್ಕೆ ಪರವಾನಿಗೆಯನ್ನು ನೀಡಬೇಕು, ಬ್ರಹ್ಮಾವರದಲ್ಲಿ ರಿಕ್ಷಾ ಪಾಸಿಂಗ್ ಮಾಡಲು ಆರ್‍ಟಿಓಗೆ ಅನುಮತಿ ನೀಡಬೇಕು, ಪ್ರತಿಯೊಂದು ಸ್ಟ್ಯಾಂಡಿನಲ್ಲಿಯೂ ರಿಕ್ಷಾ ಚಾಲಕರಿಗೆ ಬಾಡಿಗೆ ಮಾಡಲು ಅನುವು ಮಾಡಿಕೊಂಡಬೇಕು, ಉಡುಪಿ ನಗರದಲ್ಲಿ ಹೊರಪರ್ಮಿಟ್ ಮತ್ತು ಒಳಪರ್ಮಿಟಿಗೆ ಕಲರ್ ಕೋಡ್ ಒದಗಿಸಬೇಕು, ಉಡುಪಿ ಜಿಲ್ಲಾ ರಿಕ್ಷಾ ಚಾಲಕರಿಗೆ ಸರಕಾರಿ ಭೂ ನಿವೇಶನವನ್ನು ಸರಕಾರದಿಂದ ಮಂಜೂರು ಮಾಡಿಸಬೇಕು” ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.